ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಮಿತಿ ಪರಿಷ್ಕರಣೆ: ರಾಜೇಂದ್ರಕುಮಾರ್‌

ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ
Last Updated 12 ಸೆಪ್ಟೆಂಬರ್ 2020, 1:02 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್-19 ಹಾಗೂ ಅಡಿಕೆ ಧಾರಣೆಯ ಏರಿಕೆಯ ಕಾರಣದಿಂದಾಗಿ 2020-21ನೇ ಸಾಲಿಗೆ ಈಗಾಗಲೇ ನಿರ್ಧರಿಸಿರುವ ಬೆಳೆ ಸಾಲ ಮಿತಿಯನ್ನು ಪುನರ್ ನಿರ್ಧರಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ‘ಎಸ್‌ಸಿಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮವಾಗಿ ಬೆಳೆ ಸಾಲ ಮಿತಿಯನ್ನು ಪುನರ್ ನಿರ್ಧರಿಸುವ ಸಭೆ ನಡೆಯುತ್ತಿದೆ. ಕೋವಿಡ್‌–19 ನಿಂದ ಕೃಷಿಕರು ಸಾಕಷ್ಟು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಅಡಿಕೆ ಧಾರಣೆ ಕೂಡಾ ಏರಿಕೆಯಾಗಿರುವುದರಿಂದ ಕೃಷಿ ಸೇರಿದಂತೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಉದ್ಯಮಕ್ಕೆ ಘಟಕವಾರು ಮಿತಿಯನ್ನು ಪುನರ್ ನಿಗದಿಪಡಿಸಿ ಸಾಲ ನೀಡಲು ಬ್ಯಾಂಕ್ ಮುಂದಾಗಿದೆ ಎಂದು ತಿಳಿಸಿದರು.

2020-21ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡುವ ಅಲ್ಪಾವಧಿ ಬೆಳೆ ಸಾಲದ ಪುನರ್ ಮಿತಿಯನ್ನು ಕೃಷಿ ತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್ ಲೀಡ್ ಬ್ಯಾಂಕ್, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.

ಸಭೆಯಲ್ಲಿ ಭತ್ತ (ಅಧಿಕ ಇಳುವರಿ), ಅಡಿಕೆ, ತೆಂಗು, ಮೆಣಸು, ಬಾಳೆ ಹಾಗೂ ಪಪ್ಪಾಯಿ ಕೃಷಿಯ ಬೆಳೆಯ ಘಟಕವಾರು ಮಿತಿಯನ್ನು ಪರಿಷ್ಕರಿಸಲಾಯಿತು. ಹೈನುಗಾರಿಕಾ ನಿರ್ವಹಣಾ ವೆಚ್ಚಕ್ಕೆ ನೀಡುವ ಕೆಸಿಸಿ ಮಾದರಿಯಲ್ಲಿ ಹೈನುಗಾರಿಕಾ ಸಾಲದ ಮಿತಿಯನ್ನು ಪರಿಷ್ಕರಿಸಲಾಯಿತು. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮಿತಿಯನ್ನು ಪರಿಷ್ಕರಿಸಲಾಯಿತು. ಸಹಕಾರಿ ಸಂಘಗಳ ಮನವಿಯ ಮೇರೆಗೆ ಕನಿಷ್ಠ 0.25 ಎಕರೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ನೀಡಲು ತೀರ್ಮಾನಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಕೆ.ಎಸ್. ದೇವರಾಜ್, ಎಸ್.ಬಿ. ಜಯರಾಮ್ ರೈ, ಎಸ್.ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಬಿ. ಜಯರಾಜ್ ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಬ್ಯಾಂಕಿನ ಸಿಇಒ ರವೀಂದ್ರ ಬಿ., ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಮಹಾಮಂಡಳದ ಅಧ್ಯಕ್ಷ ಯಶಪಾಲ್ ಸುವರ್ಣ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ನಬಾರ್ಡ್ ಡಿಡಿಎಂ ಸಂಗೀತಾ ಕರ್ತಾ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಎಸ್. ಜಯರಾಜು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್. ಆರ್. ನಾಯಕ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಸುಶ್ಮಿತಾ ರಾವ್, ಕೃಷಿ ಹಾಗೂ ತೋಟಗಾರಿಕೆ ರಿಸರ್ಚ್ ಸೆಂಟರ್ ಸಹ ಪ್ರಾಧ್ಯಾಪಕ ಡಾ.ರವಿರಾಜ್ ಶೆಟ್ಟಿ, ಕೃಷಿ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ವಿ.ಆರ್.ವಿನೋದ್‌, ಜಿಲ್ಲಾ ಸಹಕಾರಿ ಯೂನಿಯನ್‌ಗಳ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಸ್ಕ್ಯಾಡ್ಸ್‌ನ ಅಧ್ಯಕ್ಷ ಕೆ. ರವೀಂದ್ರ ಕಂಬಳಿ, ಬ್ಯಾಂಕಿನ ಮಹಾ ಪ್ರಬಂಧಕ ಗೋಪಿನಾಥ್ ಭಟ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT