ಬಂಟ್ವಾಳ: ‘ದೇಶದಲ್ಲಿ 1961ರಲ್ಲಿ ಆರಂಭಗೊಂಡ ಎಂಆರ್ಎಫ್ ಟೈರ್ಸ್ ಕಂಪನಿಯು ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಮನೋಭಾವದಿಂದ ಸತತ 39 ವರ್ಷಗಳಿಂದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ’ ಎಂದು ಕಂಪನಿಯ ಹುಬ್ಬಳ್ಳಿ ವಲಯ ಮ್ಯಾನೇಜರ್ ಸಂದೀಪ್ ಎ. ಕುಗಾಜಿ ಹೇಳಿದರು.

ಇಲ್ಲಿನ ಮೆಲ್ಕಾರ್ ಸರ್ವಿಸ್ ರಸ್ತೆ ಬಳಿ ಸೋಮವಾರ ಆರಂಭಗೊಂಡ ಎಂಆರ್ಎಫ್ ಟೈರ್ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಂಸ್ಥೆಗೆ 17 ವರ್ಷ ಆಟೊ ಮೊಬೈಲ್ ಕಸ್ಟಮರ್ ಪ್ರಶಸ್ತಿ ದೊರೆತಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ ಎಂದರು.

ಬಂಟ್ವಾಳ ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಸಪಲ್ಯ, ಪಿಡಿಒ ಕೃಷ್ಣ ನಾಯ್ಕ್, ಉದ್ಯಮಿ ಅಬ್ದುಲ್ ಲತೀಫ್ ಕೋಟೆಕಾರ್, ಆಲಡ್ಕ ಮಸೀದಿ ಅಧ್ಯಕ್ಷ ಮೋನಾಕ್ಕ ಆಲಡ್ಕ, ಪಾಲುದಾರ ಮಹಮ್ಮದ್ ಸಿನಾನ್ ಮತ್ತಿತರರು ಇದ್ದರು.

ಇದೇ ವೇಳೆ ಡೀಲರ್ ಪತ್ರ ಹಸ್ತಾಂತರ ಮತ್ತು ಸನ್ಮಾನ ನಡೆಯಿತು. ಸಂಸ್ಥೆ ಪಾಲುದಾರ ಇಬ್ರಾಹಿಂ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶೀರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-1087785956

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.