ಮಂಗಳೂರು: ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಂಭಾವ್ಯ ಸವಾಲು ಎದುರಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಸನ್ನದ್ಧವಾಗಿದೆ.

ವಿಭಾಗವಾರು ತುರ್ತು ನಿರ್ವಹಣಾ ಕೆಲಸ ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 14 ವಿಭಾಗಗಳಿಗೆ ಒಟ್ಟು 489 ಮ೦ದಿಯ ಕಾರ್ಯಪಡೆ ರಚಿಸಲಾಗಿದೆ. ಒಟ್ಟು 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ದೂರವಾಣಿ ಕರೆಗಳ ನಿರ್ವಹಣೆಗಾಗಿ 23 ಮ೦ದಿಯ ವಿಶೇಷ ಪಡೆಯನ್ನು ಸಿದ್ದಗೊಳಿಸಲಾಗಿದೆ.

ತುರ್ತು ಸ೦ದರ್ಭದಲ್ಲಿ ಸ್ಪ೦ದಿಸಲು ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ ಅತ್ತಾವರ-12 ಮ೦ದಿಯ ಕಾಯ೯ಪಡೆ, 6 ವಾಹನ. ಕಾವೂರು-36 ಮ೦ದಿ, 8 ವಾಹನ. ಪುತ್ತೂರು- 48 ಮ೦ದಿಯ ಕಾಯ೯ಪಡೆ, 8 ವಾಹನ. ಬಂಟ್ವಾಳ - 50 ಮ೦ದಿಯ ಕಾಯ೯ಪಡೆ, 7 ವಾಹನ.

ಉಡುಪಿ ಜಿಲ್ಲೆಗೆ ಸ೦ಬಂಧಿಸಿದಂತೆ, ಉಡುಪಿ-55 ಮ೦ದಿಯ ಕಾಯ೯ಪಡೆ, 5 ವಾಹನ. ಕಾರ್ಕಳ- 24 ಮ೦ದಿಯ ಕಾರ್ಯಪಡೆ, 4 ವಾಹನ. ಕುಂದಾಪುರ - 48 ಮ೦ದಿಯ ಕಾಯ೯ಪಡೆ.

ಶಿವಮೊಗ್ಗ ಜಿಲ್ಲೆಗೆ ಸ೦ಬಂಧಿಸಿದಂತೆ, ಶಿವಮೊಗ್ಗ-33 ಮ೦ದಿಯ ಕಾರ್ಯಪಡೆ, 1 ವಾಹನ. ಶಿಕಾರಿಪುರ- 24 ಮ೦ದಿಯ ಕಾಯ೯ಪಡೆ, 3 ವಾಹನಗಳು. ಭದ್ರಾವತಿ-20 ಮ೦ದಿಯ ಕಾರ್ಯಪಡೆ, 2 ವಾಹನಗಳು. ಸಾಗರ- 34 ಮ೦ದಿಯ ಕಾರ್ಯಪಡೆ, 6 ವಾಹನಗಳು.

ಚಿಕ್ಕಮಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಚಿಕ್ಕಮಗಳೂರು-40 ಮ೦ದಿಯ ಕಾಯ೯ಪಡೆ, 4 ವಾಹನ. ಕೊಪ್ಪ-41 ಮ೦ದಿಯ ಕಾಯ೯ಪಡೆ, 3 ವಾಹನ. ಕಡೂರು 34 ಮ೦ದಿಯ ಕಾಯ೯ಪಡೆ ಹಾಗೂ 7 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ವಿದ್ಯುತ್ ಸರಬರಾಜು ವ್ಯವಸ್ಥೆಗೆ ಅಡಚಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದು, ಹಲವು ಕಡೆ ಕೆಲಸ ಪ್ರಗತಿಯಲ್ಲಿದೆ. ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬರುವ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ತಿಳಿಸಿದ್ದಾರೆ.

ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಚಟುವಟಿಕೆಗಳು ಈಗಾಗಲೇ ಪ್ರಾರಂಭಗೊಂಡಿವೆ, ಕಂಪನಿ ವ್ಯಾಪ್ತಿಯ ಎಲ್ಲಾ ಕ್ಷೇತ್ರಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು ಮತ್ತು ತಂತಿಗಳು ಕಂಡುಬಂದಲ್ಲಿ ಗ್ರಾಹಕರು ಮೆಸ್ಕಾಂಗೆ ಮಾಹಿತಿ ನೀಡುವಂತೆ ಎಂಡಿ ಹೇಳಿದ್ದಾರೆ.

ಸಹಾಯವಾಣಿ: ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗೆ 24 x 7 ಕೇಂದ್ರೀಕೃತ ಸೇವಾ ಕೇಂದ್ರವನ್ನು ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಮೂಲಕ ಸಂಪರ್ಕಿಸಬಹುದು ಅಲ್ಲದೇ ಅಪಾಯಕಾರಿ ಮತ್ತು ತುರ್ತು ಸಂದರ್ಭಗಳಲ್ಲಿ ದೂರವಾಣಿ ಸಂಖ್ಯೆ 82778 83388 ಮತ್ತು 0824-2950953ನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-126-1692909673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.