ಮಕ್ಕಳಿಗೆ ಮಜ್ಜಿಗೆ ನೀಡಲು ಕ್ರಮ ಕೈಗೊಳ್ಳಿ

7
ನಗರದ ಎರಡು ಅಂಗನವಾಡಿಗಳಿಗೆ ಸಚಿವೆ ಜಯಮಾಲಾ ಭೇಟಿ

ಮಕ್ಕಳಿಗೆ ಮಜ್ಜಿಗೆ ನೀಡಲು ಕ್ರಮ ಕೈಗೊಳ್ಳಿ

Published:
Updated:
Deccan Herald

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಡಾ.ಜಯಮಾಲಾ ಅವರು ಸೋಮವಾರ ನಗರದ ಎರಡು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.

ನಗರದ ಬಿಜೈ ಕಾಪಿಕಾಡ್ ಹಾಗೂ ಶಕ್ತಿನಗರ ಪದವು ಅಂಗನವಾಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಚಿವೆ ಡಾ. ಜಯಮಾಲಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿದರು.

ಬಿಜೈ ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಊಟವನ್ನು ಡಾ.ಜಯಮಾಲಾ ಪರಿಶೀಲಿಸಿದರು. ಊಟ ಬಡಿಸುತ್ತಿದ್ದ ಕಾರ್ಯಕರ್ತೆಯೊರೊಂದಿಗೆ ಊಟದ ಶುಚಿ ರುಚಿ ಬಗ್ಗೆ ವಿಚಾರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಊಟದ ಬಗ್ಗೆ ಮಾಹಿತಿ ಪಡೆದರು.

ಬಿಜೈ ಅಂಗನವಾಡಿಯ ಸುತ್ತ ಶುಚಿತ್ವ ನಿರ್ವಹಿಸಬೇಕು. ಮಕ್ಕಳಿಗೆ ಹೊರಾಂಗಣ ಆಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಊಟದ ಮೆನು ಕಾರ್ಡ್‌ನಲ್ಲಿರುವ ರೀತಿಯಲ್ಲಿ ಊಟ ಸರಬರಾಜು ಮಾಡಬೇಕು. ಕರಾವಳಿ ಭಾಗದ ವಾತಾವರಣವನ್ನು ಗಮನಿಸಿಕೊಂಡು, ಮಕ್ಕಳಿಗೆ ಮಜ್ಜಿಗೆ ಕೊಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಿರ್ದೇಶನ ನೀಡಿದರು.

ಬಿಜೈ ಅಂಗನವಾಡಿ ಹೊಸ ಕಟ್ಟಡ ನಿರ್ಮಿಸಲು ಬೇಕಾದ ಸ್ಥಳಾವಕಾಶ ಸರ್ಕಾರಿ ಶಾಲೆಯ ವ್ಯಾಪ್ತಿಯಿಂದ ಒದಗಿಸಲು ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಿದರು.

ಶಕ್ತಿನಗರದ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಅಂಗನವಾಡಿ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು. ದಾಸ್ತಾನು ಕೊಠಡಿಗೆ ತೆರಳಿ ದವಸಧಾನ್ಯಗಳ ಗುಣಮಟ್ಟ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !