ಪುತ್ತೂರು (ದಕ್ಷಿಣ ಕನ್ನಡ): ‘ಹಳೆಯ ಕಟ್ಟಡ ತೆರವು ವಿಚಾರದಲ್ಲಿ ದೆಹಲಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ತನಗೆ ಬೆದರಿಕೆಯೊಡ್ಡಿದ್ದಾನೆ’ ಎಂದು ಶಾಸಕ ಅಶೋಕ್ ರೈ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪುತ್ತೂರು ಮಹಾಲಿಂಗೇಶ್ವರ ದೇವಳದ ಸಮೀಪ, ಬಲ್ನಾಡು ಕ್ಷೇತ್ರದ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಬರುವ ದಾರಿಯಲ್ಲಿದ್ದ ಹಳೆಯ ಕಟ್ಟಡವನ್ನು ಭಾಗಶಃ ಕೆಡವಿದ ವಿಚಾರದಲ್ಲಿ ಈ ಬೆದರಿಕೆ ಕರೆ ಬಂದಿದೆ. ಮೊದಲು ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿ ಬೆದರಿಕೆಯೊಡ್ಡಿದ ವ್ಯಕ್ತಿ, ಬಳಿಕ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ‘ನೀವು ಖಾಸಗಿಯವರ ಜಾಗಕ್ಕೆ ಪ್ರವೇಶ ಮಾಡಿದ್ದೀರಿ. ನಾನು ದೆಹಲಿಯಿಂದ ಪಿಎಂಒ ಕಚೇರಿ (ಪ್ರಧಾನಿ ಕಾರ್ಯಾಲಯ) ಸಹಾಯದಿಂದ ಈ ಕರೆ ಮಾಡುತ್ತಿದ್ದೇನೆ’ ಎಂದು ಆತ ತಿಳಿಸಿದ್ದಾನೆ. ಕೊನೆಯಲ್ಲಿ ಆತ, ‘ನಾನು ಆದಾಯ ತೆರಿಗೆ ಇಲಾಖೆಯಿಂದ ಮಾತನಾಡುತ್ತಿದ್ದೇನೆ’ ಎಂದಿದ್ದಾನೆ. ನಾನೇನೂ ತಪ್ಪು ಮಾಡಿಲ್ಲ. ಹೀಗಿರುವಾಗ ಆದಾಯ ತೆರಿಗೆ ಇಲಾಖೆಯ ಭಯ ನನಗಿಲ್ಲ ಎಂದು ಹೇಳಿದ್ದೇನೆ’ ಎಂದರು.

‘ಈ ಬಗ್ಗೆ ಯಾಕೆ ದೂರು ನೀಡಿಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂಥ ವಿಚಾರಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನನ್ನ ಹಿತಶತ್ರುಗಳು ಕೆಲವರಿದ್ದಾರೆ. ಅಶೋಕ್ ರೈಯನ್ನು ಹೇಗಾದರೂ ಬೀಳಿಸಬೇಕು ಎಂದು ಕಾಯುತ್ತಿದ್ದಾರೆ. ಮಹಾಲಿಂಗೇಶ್ವರ ದೇವರ ಕಾರ್ಯಕ್ಕೆ ಬೇಕಾಗಿ ನಾನು ನೂರು ಪ್ರಕರಣ ಹಾಕಿಸಿಕೊಳ್ಳಲೂ ಸಿದ್ಧ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-1996904811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.