ಶುಕ್ರವಾರ, ಜೂನ್ 5, 2020
27 °C

ಬ್ಯಾಂಕ್ ಸಿಬ್ಬಂದಿಗೆ ಶಾಸಕರ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಯನ್ನು ಕೆನರಾ ಬ್ಯಾಂಕ್ ಕದ್ರಿ ಶಾಖೆಯಲ್ಲಿ ಸನ್ಮಾನಿಸಲಾಯಿತು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದೇಶ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಬ್ಯಾಂಕ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದು, ಇತರ ಕೋವಿಡ್ ವಾರಿಯರ್ಸ್‌ನಂತೆಯೇ ಬ್ಯಾಂಕ್ ಸಿಬ್ಬಂದಿ ಕೂಡ ಸನ್ಮಾನಕ್ಕೆ ಅರ್ಹರು ಎಂದು ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಯೋಗಿಶ್ ಅಚಾರ್ಯ ಅವರನ್ನು ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಪ್ರತಿನಿಧಿಯಾಗಿ ಮತ್ತು ಕದ್ರಿ ಶಾಖೆಯ ಮುಖ್ಯ ಪ್ರಬಂಧಕ ರಂಜನ್ ಕೇಟರ್ ಹಾಗೂ ಶಾಖೆಯ ಎಲ್ಲ ಸಿಬ್ಬಂದಿಗೆ ಪುಷ್ಪ ನೀಡಿ ಗೌರವಿಸಲಾಯಿತು.

ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಪ್ರವೀಣ್ ಎಂ.ಪಿ., ಸಹಾಯಕ ಮಹಾ ಪ್ರಬಂಧಕ ಪುಪ್ಪರಾಜ್ ಹೆಗ್ಡೆ, ರಮಾಕಾಂತ್ ಭಟ್ ಹಾಗೂ ಅಮೂಲ್ಯಾ ಸಾಕ್ಯಾರತೆ, ಕೇಂದ್ರದ ಹಿರಿಯ ಸಲಹೆಗಾರ ಸರೀಶ್ ಅತ್ತಾವರ್ ಇದ್ದರು. ಬ್ಯಾಂಕಿನ ಗ್ರಾಹಕರಾದ ಹೇಮಂತ ಬಿಡ ಮತ್ತು ಅರುಣ್ ಕುಮಾರ್ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು