ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳಿಗೂ ತುಳು ಲಿಪಿ ಕಲಿಸಿ: ಶಾಸಕ ಖಾದರ್

ಸೋಮೇಶ್ವರ ಪುರಸಭೆ: ಕೊಲ್ಯ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ
Last Updated 26 ಫೆಬ್ರುವರಿ 2020, 12:12 IST
ಅಕ್ಷರ ಗಾತ್ರ

ಉಳ್ಳಾಲ: ‘ತುಳು ಲಿಪಿಯನ್ನು ಅಂಗನವಾಡಿ ಮಕ್ಕಳಿಗೆ ಅಭ್ಯಾಸ ಮಾಡಿಸುವ ಕಾರ್ಯ ಆಗಲಿ’ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡದ ಜ‌ತೆಗೆ ಇಂಗ್ಲಿಷ್‌, ತುಳು, ಹಿಂದಿ ಭಾಷೆಗಳ ಲಿಪಿಯನ್ನು ಅಂಗನವಾಡಿ ಮಕ್ಕಳಿಗೆ ಕಲಿಸುವ ಕಾರ್ಯ ಆಗಲಿ. ಪ್ರಥಮ ಶಿಕ್ಷಣ ಅಂಗನವಾಡಿಗೆ ಹೆಚ್ಚಿನ ಒತ್ತು . ಆರೋಗ್ಯವಂತ ತಾಯಿ, ಮಗು ಇರಬೇಕು ಅನ್ನುವ ಉದ್ದೇಶದಿಂದ ಮನೆ ಬಾಗಿಲಲ್ಲಿ ಅಂಗನವಾಡಿ ಇರುವ ಕಾನೂನು ಇದೆ. ಅಂಗನವಾಡಿ ಊರಿನ ಎಲ್ಲಾ ವರ್ಗದವರ ಕೇಂದ್ರವಾಗಿದೆ’ ಎಂದರು.

‘ಕುಡಿಯುವ ನೀರಿನ ಯೋಜನೆಗೆ ಡಿಜಿಟಲ್ ಮೀಟರ್‌ ಅಳವಡಿಸಲು ಸೂಚಿಸಲಾಗಿದೆ. ಒಳಚರಂಡಿ (ಯುಜಿಡಿ)ಯೋಜನೆಗೆ ಪ್ರಸ್ತಾವನೆ ಕೂಡಲೇ ಆಡಳಿತ ಕಳುಹಿಸಬೇಕಾಗಿದೆ. ಮೈದಾನಕ್ಕೆ ಸಂಬಂಧಿಸಿ ನೀಲಿ ನಕಾಶೆಯನ್ನು ಶ್ರೀರಾಮ್ ಫ್ರೆಂಡ್ಸ್ ಸರ್ಕಲ್ ತಯಾರಿಸಿ ಕಳುಹಿಸಿ ಕೊಡಿ. ₹1 ಕೋಟಿ ಅನುದಾನ ಮೈದಾನಕ್ಕೆ ಮೀಸಲಿಟ್ಟರೂ ಉಳ್ಳಾಲದಲ್ಲಿ ಜಾಗದ ಕೊರತೆಯಿದೆ’ ಎಂದು ಶಾಸಕ ಖಾದರ್‌ ತಿಳಿಸಿದರು.

ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷೆ ಸುಶೀಲಾ ನಾಯಕ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಜಿಲ್ಲಾ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಶ್ಯಾಮಲಾ ಸಿ.ಕೆ , ಜಿಲ್ಲಾಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಕೋಟೆಕಾರು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ಕನೀರುತೋಟ, ಶ್ರೀರಾಮ ಭಜನಾ ಮಂದಿರ ಕೊಲ್ಯ ಮಾಜಿ ಅಧ್ಯಕ್ಷ ತನಿಯಪ್ಪ ಪೂಜಾರಿ ಪರಿಯತ್ತೂರು, ರಮಾನಂದ ಸ್ವಾಮಿ ಶಾಲೆಯ ಮುಖ್ಯಶಿಕ್ಷಕಿ ಪದ್ಮಾವತಿ, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯೆ ಜಯಶ್ರೀ ಪ್ರಫುಲ್ಲಾ ದಾಸ್, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್ , ಪದ್ಮಾವತಿ, ಬಿಲ್ಲವ ಸೇವಾ ಸಮಾಜ ಕೊಲ್ಯ ಅಧ್ಯಕ್ಷ ವೇಣುಗೋಪಾಲ್ , ಗುತ್ತಿಗೆದಾರ ಕೈಲಾಸ್ ಬಾಬು ಮುಖ್ಯಅತಿಥಿಗಳಾಗಿದ್ದರು. ಸೋಮೇಶ್ವರ ಪುರಸಭೆ ಸದಸ್ಯ ಗೋಪಾಲಕೃಷ್ಣ ಸೋಮೇಶ್ವರ, ಪ್ರಕಾಶ್ ಎ.ಚ್ ಕೊಲ್ಯ , ಉಳ್ಳಾಲ ವಲಯ ಅಂಗನವಾಡಿ ಮೇಲ್ವಿಚಾರಕಿ ಕಲ್ಪನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT