ಕೊಚ್ಚಿ (ಪಿಟಿಐ): ಪ್ರಯಾಗ್ರಾಜ್ನ ಕುಂಭಮೇಳದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದ ಮೊನಾಲಿಸಾ ಭೋಂಸ್ಲೆಯನ್ನು ಅಪಹರಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಆಕೆಯ ಪತಿ ಫರ್ಮಾನ್ ಖಾನ್ ಅವರಿಗೆ, ಕೇರಳ ಹೈಕೋರ್ಟ್ ಒಂದು ತಿಂಗಳ ವರೆಗೆ ಪ್ರಯಾಣ ಜಾಮೀನು ನೀಡಿದೆ.

‘ಅಪ್ರಾಪ್ತ ವಯಸ್ಸಿನವಳಾಗಿರುವ ಮೊನಾಲಿಸಾಳನ್ನು ಫರ್ಮಾನ್ ಅಪಹರಿಸಿ ವಿವಾಹವಾಗಿದ್ದಾನೆ’ ಎಂದು ಆರೋಪಿಸಿ ಆಕೆಯ ತಂದೆ ದೂರು ನೀಡಿದ್ದರು.

ಮೊನಾಲಿಸಾಳ ಜನನ ಪ್ರಮಾಣ ಪತ್ರದಲ್ಲಿ, 2008ರ ಜನವರಿ 1 ಜನ್ಮ ದಿನಾಂಕ ಎಂಬ ಉಲ್ಲೇಖವಿದೆ. ಹಲವು ದಾಖಲೆಗಳನ್ನು ಗಮನಿಸಿದಾಗ ಈಕೆ ಅಪ್ರಾಪ್ತ ವಯಸ್ಸಿನವಳಲ್ಲ ಎಂದು ತಿಳಿದು ಬಂದಿದೆ ಎಂದು ನ್ಯಾಯಾಲಯವು ಹೇಳಿತು. ಮಧ್ಯಪ್ರದೇಶ ಪೊಲೀಸರ ಪರ ಹಾಜರಾಗಿದ್ದ ಭಾರತದ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು, ‘ಮೊನಾಲಿಸಾ ಅಪ್ರಾಪ್ತ ವಯಸ್ಸಿನವಳಾಗಿದ್ದು, ಆಕೆಯ ಜನನ ಪ್ರಮಾಣ ಪತ್ರವು ನಕಲಿಯಾಗಿದೆ’ ಎಂದು ನ್ಯಾಯಾಲಯಕ್ಕೆ ಹೇಳಿದರು.

ಈ ವಾದವನ್ನು ಒಪ್ಪದ ನ್ಯಾಯಾಲಯವು ‘ಇದು ತನಿಖೆ ಮಾಡಬೇಕಾದ ವಿಷಯ’ ಎಂದಿತು.

‘ಒಂದು ತಿಂಗಳವರೆಗೆ ಆರೋಪಿಯನ್ನು ಬಂಧಿಸಬಾರದು’ ಎಂದು ಆದೇಶಿಸಿರುವ ಕೋರ್ಟ್, ‘ಮಧ್ಯಪ್ರದೇಶದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸ ಬಹುದು’ ಎಂದು ಅನುಮತಿ ನೀಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-60691084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.