ಮಾನ್ಸೂನ್ ಚೆಸ್ ಪಂದ್ಯಾಟ: ಉಜಿರೆ ಎಸ್‍ಡಿಎಂನ ಶಬ್ಧಿಕ್ ವರ್ಮ ಪ್ರಥಮ

7

ಮಾನ್ಸೂನ್ ಚೆಸ್ ಪಂದ್ಯಾಟ: ಉಜಿರೆ ಎಸ್‍ಡಿಎಂನ ಶಬ್ಧಿಕ್ ವರ್ಮ ಪ್ರಥಮ

Published:
Updated:

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ 39ನೇ ಮಾನ್ಸೂನ್ ಚೆಸ್ ಪಂದ್ಯಾಟದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿ ಶಬ್ದಿಕ್ ವರ್ಮ ಅವರು ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಶಿಪ್ ಪಡೆದುಕೊಂಡರು.

ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಆಂಡ್ರಿಯಾ ಎಲ್ ಡಿಸೋಜ ಅವರು ದ್ವಿತಿಯ ಸ್ಥಾನ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿ ಶಿವರಾಮ ಅವರು ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಸುಕನ್ಯ ಶೆಟ್ಟಿ, ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಶೆಟ್ಟಿ , ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ ಶುಭಶ್ರೀ ಎಸ್ ವಿ ಉತ್ತಮ ಮಹಿಳಾ ಆಟಗಾರ್ತಿಯರಾಗಿ ಮೂಡಿಬಂದರು. ಮನಸ್ಸಿಗೆ ಖುಷಿ ನೀಡಿದ ಆಟಗಳು ಜೀವನಕ್ಕೆ ಪ್ರೇರಣೆ.

ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಡಿಮೆ ಆಗುತ್ತಿದೆ. ಆದರೆ ಚೆಸ್ ಆಟ ಏಕಾಗ್ರತೆ ಹೆಚ್ಚಿಸುವುದರಲ್ಲಿ ನೆರವಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಯು ಕೊನೆಯವರೆಗು ತಾನೆ ಗೆಲ್ಲುತ್ತಾನೆ ಎಂಬ ಆತ್ಮವಿಶ್ವಾಸದಿಂದಿರಬೇಕು. ಆದರೆ ಸ್ಪರ್ಧೆ ಕೇವಲ ಸೋಲು, ಗೆಲುವಿನ ಲೆಕ್ಕಚಾರವಾಗದೆ ಮನಸ್ಸಿಗೆ ಆನಂದವನ್ನು ನೀಡುವಂತಿರಬೇಕು ಎಂದರು.

ಯಾವುದೇ ಆಟ, ಆಟಗಾರನಿಗೆ ತೃಪ್ತಿ ನೀಡಬೇಕು.ಮನಸ್ಸಿಗೆ ಖುಷಿ ನೀಡಿದ ಆಟಗಳು ಜೀವನಕ್ಕೆ ಪ್ರೇರಣೆಯಾಗುತ್ತವೆ. ಚೆಸ್ ಆಟ ಕಲಿಕೆಗೂ ಪೂರಕವಾಗುತ್ತದೆ. ಇದರಲ್ಲಿ ನೈಪುಣ್ಯತೆ ಹೊಂದಿದವರಿಗೆ ಸಂಶೋಧನೆ ಕ್ಷೇತ್ರ ಸುಲಭವಾಗುತ್ತದೆ ಎಂದು ಅವರು ತಿಳಿಸಿದರು.

ವಿವೇಕಾನಂದ ಪದವಿ ಕಾಲೇಜಿನನ ಆಡಳಿತ ಮಂಡಳಿಯ ಸದಸ್ಯ ಮೋಹನ್ ಕೆ ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ನಾಗರಾಜ್ ನಾಯಕ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ದೈಹಿಕ ಶಿಕ್ಷಕಿ ಡಾ.ಜ್ಯೋತಿ ಕುಮಾರಿ ಇದ್ದರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಯತೀಶ್ ಸ್ವಾಗತಿಸಿದರು. 39ನೇ ಮಾನ್ಸೂನ್ ಚೆಸ್ ಪಂದ್ಯಾಟದ ಮುಖ್ಯ ನಿರ್ವಾಹಕ ಪ್ರಸನ್ನ ರಾವ್ ಅಭಿಪ್ರಾಯವನ್ನು ಹಂಚಿಕೊಂಡರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !