ಮಂಗಳವಾರ, ಸೆಪ್ಟೆಂಬರ್ 21, 2021
28 °C
ಮೂಡ: ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ನಿವೇಶನಗಳ ಶುಲ್ಕ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಮಗಳಂತೆ ನಿವೇಶನಗಳಿಗೆ ಸಂಬಂಧಿಸಿದ ಶುಲ್ಕವನ್ನು ಪರಿಷ್ಕರಿಸಿ ಪ್ರಕಟಿಸಿದ್ದು, ಇದರಿಂದ ಮೂಡ (ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ) ವ್ಯಾಪ್ತಿಯಲ್ಲಿ ವಸತಿ ಉದ್ದೇಶಗಳಿಗೆ ಈ ಹಿಂದಿಗಿಂತ 4 ಪಟ್ಟು ಕಡಿಮೆ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ 2 ಪಟ್ಟು ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಸತಿ ಉದ್ದೇಶಕ್ಕೆ ಮಾರುಕಟ್ಟೆ ಮೌಲ್ಯದ ಶೇ 0.1, ವಾಣಿಜ್ಯ ಉದ್ದೇಶಕ್ಕೆ ಶೇ 0.5 ಮತ್ತು ಕೈಗಾರಿಕಾ ಉದ್ದೇಶಕ್ಕೆ ಶೇ 0.3, ನೀರು ಪೂರೈಕೆ ಯೋಜನೆಗೆ ಮಾರುಕಟ್ಟೆ ಮೌಲ್ಯದ ಶೇ 10, ರಿಂಗ್ ರೋಡ್ ಸಂಬಂಧಿಸಿ ಮಾರುಕಟ್ಟೆ ಮೌಲ್ಯದ ಶೇ 10, ಕೊಳಚೆ ಅಭಿವೃದ್ಧಿಗೆ ಮಾರುಕಟ್ಟೆ ಮೌಲ್ಯದ ಶೇ 5 ಹೀಗೆ ಒಟ್ಟು ಮಾರುಕಟ್ಟೆ ಮೌಲ್ಯದ ಶೇ 25ರಷ್ಟನ್ನು ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ಪಾವತಿಸಿಕೊಳ್ಳಲು ಆದೇಶಿಸಲಾಗಿದೆ ಎಂದು ವಿವರಿಸಿದರು.

ಆಕ್ಷೇಪ ಸಲ್ಲಿಸಲು ಅವಕಾಶ: ಇಲ್ಲಿನ ಮಹಾಯೋಜನೆ ನಕ್ಷೆಗೆ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದ್ದು, ಈ ಕುರಿತ ಪ್ರಕಟಣೆ, ನಕ್ಷೆ ಮತ್ತು ವರದಿಗಳನ್ನು ಮೂಡ ಕಚೇರಿ ಫಲಕದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಅಂತಿಮ ಅನುಮೋದನೆಯನ್ನು ತಾತ್ಕಾಲಿಕ ಅನುಮೋದನೆಯ 4 ತಿಂಗಳ ಒಳಗಾಗಿ ಪಡೆಯಲಾಗುವುದು ಎಂದು ತಿಳಿಸಿದರು.

ಕಟ್ಟಡ ಪರವಾನಗಿ ಮತ್ತು ಖಾತೆ ಪಡೆಯಲು ತೊಂದರೆ ಆಗಿದ್ದನ್ನು ಗಮನಿಸಿ ಸರ್ಕಾರದೊಂದಿಗೆ ನಿರಂತರ ಚರ್ಚೆ ನಡೆಸಿದ ಪರಿಣಾಮವಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಮೂರು ತಿಂಗಳ ಮೊದಲು ಮೂಡುಬಿದಿರೆ ಪುರಸಭೆಯಿಂದ ಕಟ್ಟಡ ಪರವಾನಗಿ ಮತ್ತು ಖಾತೆ ಪಡೆಯಲು ಸರ್ಕಾರ ಆದೇಶಿಸಿತ್ತು ಎಂದು ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ ಹೇಳಿದರು.

ಮೂಡ ಸದಸ್ಯರಾದ ಲಕ್ಷ್ಮಣ ಪೂಜಾರಿ, ಗೋಪಾಲ ಶೆಟ್ಟಿಗಾರ್, ಮಂಜುನಾಥ ರೈ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.