ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕಳೆದ ವರ್ಷ ಜುಲೈ 10ರಂದು ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಸದಸ್ಯರು ಬಹುಮತ ಪಡೆದಿದ್ದಾರೆ.

ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಕೃಷ್ಣರಾಜ ಹೆಗ್ಡೆ, ಸಿಪ್ರಿಯನ್ ಪಿಂಟೊ, ಸತೀಶ್ ಶೆಟ್ಟಿ, ನಳಿನಿ ಆರ್.ಹೆಗ್ಡೆ, ರಮೇಶ್ ಚಂದ್ರ ಪಿ., ಜಯಂತಿ ಹಾಗೂ ಯಾದವ ನಲಿಕೆ ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ಅಲ್ವಿನ್ ಮಿನೇಜಸ್, ಸುರೇಶ್ ಕೋಟ್ಯಾನ್, ಪದ್ಮಯ್ಯ ಸುವರ್ಣ, ಸತೀಶ್ ಕೋಟ್ಯಾನ್ ಚುನಾಯಿತರಾದರು.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ವಿಲಾಸ್ ಕುಮಾರ್ ಚುನಾವಣಾಧಿಕಾರಿಯಾಗಿ ಹಾಗೂ ಕಲ್ಲಬೆಟ್ಟು ಸೊಸೈಟಿ ಸಿಇಒ ಅನಿತಾ ಆರ್.ಶೆಟ್ಟಿ ಸಹಾಯಕ ಚುನಾವಣಾಧಿ ಕಾರಿಯಾಗಿ ಕಾರ್ಯ ನಿರ್ವಹಿಸಿದರು.

2025ರ ಜುಲೈ 10ರಂದು ಸಂಘದ 11 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ಅನರ್ಹ ಮತದಾರರ ಅನರ್ಹ ವಿಚಾರ ಸಂಬಂಧ ಪ್ರಕರಣ ಹೈಕೋರ್ಟ್ ಮೆಟ್ಟಲೇರಿತ್ತು. ವಿಚಾರಣೆ ಬಳಿಕ ಅನರ್ಹಗೊಂಡಿದ್ದ ಮತದಾರರ ಮತವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೋರ್ಟ್ ಸೂಚಿಸಿ ಜೂನ್ 3ರಂದು ಫಲಿತಾಂಶ ಪ್ರಕಟಣೆಗೆ ಆದೇಶಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-29-984855274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.