ಮೂಡುಬಿದಿರೆ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ವ್ಯಾಪಕ ಹಾನಿ ಉಂಟಾಗಿದೆ. ಹಲವೆಡೆ ಮನೆಗಳ ಚಾವಣಿ ಹಾರಿ ಹೋಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಹಲವು ಗ್ರಾಮಗಳಿಗೆ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

ಆಲಂಗಾರು, ಉಳಿಯ ಪ್ರದೇಶಗಳಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಪ್ಪಿ ಎಂಬುವರ ಮನೆ ಮೇಲೆ ಮರ ಬಿದ್ದು ಶ್ರುತಿ (28) ಎಂಬುವರಿಗೆ ಗಾಯಗಳಾಗಿವೆ. ಸ್ವರಾಜ್ಯ ಮೈದಾನ ಬಳಿಯ ಧನಂಜಯ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ನಷ್ಟ ಸಂಭವಿಸಿದೆ. ಮಾರೂರಿನ ವನಿತಾ ಅವರ ಮನೆಯ ಚಾವಣಿ ಗಾಳಿಗೆ ಹಾರಿಹೋಗಿದೆ. ಶಶಿಕಲಾ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಜಿ.ಕೆ. ಗಾರ್ಡನ್ನಿಂದ ಪಂಡಿತ್ ರೆಸಾರ್ಟ್ವರೆಗಿನ ರಸ್ತೆಯಲ್ಲಿ 4ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಸವನಕಜೆಯ ಶಂಕರ್ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದು ಚಾವಣಿ ಪುಡಿಯಾಗಿದೆ. ಮನೆಯವರು ಕಾರ್ಯಕ್ರಮವೊಂದಕ್ಕೆ ಹೊರಗೆ ತೆರಳಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಸುಲೋಚನ ಹೆಗ್ಡೆ, ದಿನೇಶ್ ಶೆಟ್ಟಿ, ವಿಜಯ ಹೆಗ್ಡೆ ಅವರ ಮನೆಗಳ ಶೀಟುಗಳು ಹಾರಿಹೋಗಿವೆ.

ಬನ್ನಡ್ಕ ಮುಖ್ಯರಸ್ತೆಯ ಗೂಡಂಗಡಿಯೊಂದರ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ನಾರಾಯಣ ದೇವಾಡಿಗ ಎಂಬುವರ ಅಂಗಡಿ ಜಖಂಗೊಂಡಿದೆ. ಇರುವೈಲು ಪರಾರಿ ಎಂಬಲ್ಲಿ ರಮೇಶ್ ಪ್ರಭು ಅವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-2033845675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.