ಮೂಡುಬಿದಿರೆ: ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಪುರಸಭೆ ವ್ಯಾಪ್ತಿಯ ಪುಚ್ಚೆಮೊಗರು ಪಲ್ಗುಣಿ ನದಿಯ ಒಡಲು ಬರಿದಾಗಿದ್ದು ಎರಡು ವರ್ಷಗಳ ಬಳಿಕ ಮೂಡುಬಿದಿರೆ ನಗರವಾಸಿಗಳಿಗೆ ನೀರಿನ ಅಭಾವ ಉಂಟಾಗಿದೆ.

ಪುಚ್ಚೆಮೊಗರು ನದಿ ಬಹುತೇಕ ಒಣಗಿ ಹೋಗಿದೆ. ಬದಲಿ ವ್ಯವಸ್ಥೆಯಾಗಿ ನದಿಯ ಪಕ್ಕದಲ್ಲಿರುವ ಮದ್ಮಲ್ ಗುಂಡಿಗೆ ಎರಡು ಪಂಪ್ ಅಳವಡಿಸಿ ಪುರಸಭೆಯ ಜಾಕ್ವೆಲ್ಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಈ ತಾತ್ಕಾಲಿಕ ವ್ಯವಸ್ಥೆಯಿಂದ ದಿನಕ್ಕೆ ಮೊದಲ ಅವಧಿಯಲ್ಲಿ ಸುಮಾರು ನಾಲ್ಕು ಗಂಟೆ ಮತ್ತು ಎರಡನೇ ಅವಧಿಯಲ್ಲಿ ಸುಮಾರು ನಾಲ್ಕು ಗಂಟೆ ಮಾತ್ರ ನೀರು ಪೂರೈಕೆ ಮಾಡಲು ಸಾಧ್ಯ ಎನ್ನಲಾಗಿದೆ. ಮದ್ಮಲ್ ಗುಂಡಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಾ ಬಂದಿದ್ದು, ಹತ್ತು ದಿನದಲ್ಲಿ ಇಲ್ಲೂ ನೀರು ಪೂರ್ತಿ ಬರಿದಾಗುವ ಆತಂಕ ಇದೆ.

ಬಾರದ ಮಳೆ: ಸಾಮಾನ್ಯವಾಗಿ ಏಪ್ರಿಲ್ನಲ್ಲಿ ಮುಂಗಾರು ಪೂರ್ವ ಮಳೆ ಬಿದ್ದರೆ ಮುಚ್ಚೆಮೊಗರಿನ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ಇನ್ನೂ ಮಳೆ ಬಾರದೆ ಇರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ವಿಪರೀತ ಬಿಸಿಲಿನ ತಾಪದಿಂದಾಗಿ ಇದ್ದ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಕಳೆದ ವರ್ಷ ಸೋಹಂ ಪವರ್ ಪ್ರಾಜೆಕ್ಟ್ನಲ್ಲಿ ಸಂಗ್ರಹಿಸಿದ್ದ ನೀರನ್ನು ಪುಚ್ಚೆಮೊಗರು ನದಿಗೆ ಹರಿ ಬಿಟ್ಟಿದ್ದರಿಂದ ಮತ್ತು ಏಪ್ರಿಲ್ನಲ್ಲಿ ಮುಂಗಾರು ಪೂರ್ವ ಮಳೆ ಬಂದಿದ್ದರಿಂದ ಪಲ್ಗುಣಿ ನದಿಯಲ್ಲಿ ಬೇಸಿಗೆಯಲ್ಲಿ ನೀರು ಹರಿಯಲು ಆರಂಭವಾಗಿತ್ತು. ಸೋಹಂ ಘಟಕದ ದುರಸ್ತಿ ಕಾರಣ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಸಮಗ್ರಹ ಇಲ್ಲ. ಪುಚ್ಚೆಮೊಗರು ನದಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

ಎರಡು ದಿನಕ್ಕೊಮ್ಮೆ ಪೂರೈಕೆ: ಪುಚ್ಚೆಮೊಗರಿನ ಪಲ್ಗುಣಿ ನದಿಯಲ್ಲಿ ನೀರು ಬರಿದಾಗಿರುವುದರಿಂದ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಏ. 18ರಿಂದ ನಗರ ವಾಸಿಗಳಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಪುರಸಭೆ ಕ್ರಮ ಕೈಗೊಂಡಿದ್ದು, ನೀರು ದುರ್ಬಳಕೆಯಾಗುವುದನ್ನು ತಡೆಯಲು ಮುಂದಾಗಿದೆ. ನಗರದ ಜನತೆಗೆ ನೀರು ಪೂರೈಕೆಗಾಗಿ ಈಗಾಗಲೇ ಪುರಸಭೆ ಸುಮಾರು 168 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಕೆಲವಡೆ ಪುರಸಭೆ ಟ್ಯಾಂಕರ್ಗಳ ಮೂಲಕ ನೀರನ್ನು ಟ್ಯಾಂಕ್ಗೆ ತುಂಬಿಸಿ ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿದೆ.

ಪಲ್ಗುಣಿ ನದಿ ಬರಿದಾಗಿರುವುದರಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನೀರಿನ ಅಭಾವ ತೀವ್ರಗೊಂಡರೆ ಖಾಸಗಿ ಕೊಳವೆಬಾವಿ, ತೆರೆದ ಬಾವಿಗಳ ನೀರನ್ನು ಪುರಸಭೆ ವತಿಯಿಂದ ಬಳಕೆ ಮಾಡಲಾಗುವುದು ಎಂದು ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.