ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ: ಟಾಪ್‌ ಟೆನ್‌ನಲ್ಲಿ ಆಳ್ವಾಸ್ ಪತ್ರಿಕೋದ್ಯಮ

ಇಂಡಿಯಾ ಟುಡೇ ಅಖಿಲ ಭಾರತ ಮಟ್ಟದ ಸಮೀಕ್ಷೆ: ಮೂಡುಬಿದಿರೆಯ ಆಳ್ವಾಸ್‌ಗೆ ಹಲವು ಸ್ಥಾನ
Last Updated 6 ಜುಲೈ 2022, 11:01 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ದೇಶದ 10 ಕಾಲೇಜುಗಳ ಪೈಕಿ ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವು ಸ್ಥಾನ ಪಡೆದಿದೆ.

ಇಂಡಿಯಾ ಟುಡೇ ನಿಯತಕಾಲಿಕ 2022ನೇ ಸಾಲಿನ ಎಂಡಿಆರ್‌ಎ (ಮಾರ್ಕೆಟಿಂಗ್‌ ಆ್ಯಂಡ್ ಡೆವಲಪ್‌ಮೆಂಟ್ ರಿಸರ್ಚ್‌ ಅಸೋಸಿಯೇಟ್ಸ್‌) ಸಮೀಕ್ಷೆ ಬಿಡುಗಡೆ ಮಾಡಿದ್ದು, ಆಳ್ವಾಸ್ ಕಾಲೇಜಿನ ವಿವಿಧ ವಿಭಾಗಗಳು ಅಖಿಲ ಭಾರತ ಮಟ್ಟದಲ್ಲಿ ಉನ್ನತ ರ್‍ಯಾಂಕಿಂಗ್‌ ಪಡೆದುಕೊಂಡಿವೆ.

ಅಖಿಲ ಭಾರತ ಮಟ್ಟದಲ್ಲಿ ಸಮಗ್ರ ರ್‍ಯಾಂಕಿಂಗ್‌ನಲ್ಲಿ ‌ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ 37, ಪದವಿ ವಿಜ್ಞಾನ 122, ಕಲಾ ವಿಭಾಗ 123, ಬಿಸಿಎ 135, ಬಿಬಿಎ 147 ಹಾಗೂ ವಾಣಿಜ್ಯ ವಿಭಾಗವು 175ನೇ ರ್‍ಯಾಂಕ್‌ ಪಡೆದುಕೊಂಡಿವೆ.

ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಕಲಿಕೆಗೆ ಅಗತ್ಯವಿರುವ ಸೌಕರ್ಯಗಳು , ಸ್ವೀಕೃತ ಅರ್ಜಿಗಳ ಗುಣಮಟ್ಟ, ಉದ್ಯೋಗ ಭದ್ರತೆ, ವ್ಯಕ್ತಿತ್ವ ಹಾಗೂ ನಾಯಕತ್ವ ಕೌಶಲ್ಯ ಹಾಗೂ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ಗುರುತಿಸಿ ಈ ಶ್ರೇಣಿಗಳನ್ನು ನೀಡಲಾಗುತ್ತದೆ.

ಕಳೆದ ಬಾರಿಯ ಆಲ್ ಇಂಡಿಯಾ ರ್‍ಯಾಂಕಿಂಗ್‌ನಲ್ಲಿ ಪತ್ರಿಕೋದ್ಯಮ ವಿಭಾಗ 40ನೇ ರ್‍ಯಾಂಕ್‌ ಲಭಿಸಿದ್ದು, ಈ ಬಾರಿ 37ಕ್ಕೇರಿದೆ.ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ವಿಭಾಗದಲ್ಲಿ 10 ನೇ ರ್‍ಯಾಂಕ್‌ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT