ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ: ಯುವತಿಯ ಬೆದರಿಸಿದ ಯುವಕನ ಬಂಧನ

Published : 30 ಆಗಸ್ಟ್ 2024, 15:31 IST
Last Updated : 30 ಆಗಸ್ಟ್ 2024, 15:31 IST
ಫಾಲೋ ಮಾಡಿ
Comments

ಮೂಡುಬಿದಿರೆ: ಮೊಬೈಲ್ ಕರೆ ಸ್ವೀಕರಿಸದ ಸಿಟ್ಟಿಗೆ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿದ ಆರೋಪಿ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಅರ್ಶಾದ್‌ (22)ಎಂದು ತಿಳಿದುಬಂದಿದೆ. ಈತ ಮೂಲತಃ ಇರುವೈಲಿನವನಾಗಿದ್ದು, ಕೊಡಂಗಲ್ಲು ಸಮೀಪದ ಪಿಲಿಪಂಜರದಲ್ಲಿ ಬಾಡಿಗೆ ಮನೆಯಲ್ಲಿದ್ದು, ಇತ್ತೀಚೆಗೆ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯೊಂದಕ್ಕೆ ವಾಸ್ತವ್ಯ ಬದಲಿಸಿದ್ದ. ಮೂಡುಬಿದಿರೆಯ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೋಟೆಬಾಗಿಲಿನ ಯುವತಿ ಕೆಲ ಸಮಯಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ಆಕೆಯ ಜತೆ ಅರ್ಶಾದ್‌ಗೆ ಸ್ನೇಹವಿದ್ದು, ಇಬ್ಬರೂ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಯುವತಿ ಅರ್ಶಾದ್‌ನ ಸಂಪರ್ಕದಿಂದ ದೂರ ಉಳಿದು ಆತನ ಮೊಬೈಲ್ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಗುರುವಾರ ಸಂಜೆ ಯುವತಿ ಮೂಡುಬಿದಿರೆ ಹಳೆ ಪೊಲೀಸ್ ಸ್ಟೇಷನ್ ಬಳಿ ಇರುವ ಟೈಲರ್ ಅಂಗಡಿಯಿಂದ ಸ್ಕೂಟರ್‌ನಲ್ಲಿ ಮನೆಗೆ ಹೊರಟಾಗ ಅರ್ಶಾದ್‌ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿದ್ದಾನೆ. ಯುವತಿಯ ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.

ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT