ಮೂಡುಬಿದಿರೆ: ಮುಂಬೈ ಉದ್ಯಮಿ ಹಾಗೂ ತುಳುನಾಡ ಸೇನಾ ಸ್ಥಾಪಕ ಮಿಜಾರು ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರು ಹುಟ್ಟೂರಾದ ಮಿಜಾರು ತೋಡಾರು ಗ್ರಾಮಗಳ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿಯ ಆರು ವಿದ್ಯಾ ಸಂಸ್ಥೆಗಳ 1,360 ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ, ಬ್ಯಾಗ್ಗಳನ್ನು ಹಾಗೂ ವಿದ್ಯಾನಿಧಿ ಯೋಜನೆಯಲ್ಲಿ 200 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರದಂತೆ ಒಟ್ಟು ₹ 10 ಲಕ್ಷ ಪ್ರೋತ್ಸಾಹ ಧನವನ್ನು ವಿತರಿಸಿದರು.

ಬಂಗಬೆಟ್ಟು ಶಾಲಾ ಮೈದಾನ ದಲ್ಲಿ ಮಂಗಳವಾರ ನಡೆದ ಸಮಾ ರಂಭವನ್ನು ಉದ್ಘಾಟಿಸಿ ಸಮವಸ್ತ್ರ ವಿತರಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಗಳಿಸಿದ ಸಂಪತ್ತನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡಬೇಕು. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗುತ್ತವೆ. ಈ ನಿಟ್ಟಿನಲ್ಲಿ ಸುರೇಶ್ ಶೆಟ್ಟಿ ಅವರು ಪುತ್ರಿ ಝಾನ್ಸಿ ಅವರ ಜನ್ಮದಿನದ ಪ್ರಯುಕ್ತ ಊರಿನ ಮಕ್ಕಳಿಗೆ ನೀಡಿದ ಕೊಡುಗೆ ಶ್ಲಾಘನೀಯ ಎಂದರು.

ಮೂಡುಬಿದಿರೆ ಪತ್ರಿಕಾ ಭವನಕ್ಕೆ ₹ 1 ಲಕ್ಷ ನೆರವನ್ನು ಹಸ್ತಾಂತರಿಸಿದರು.

ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ತೆಂಕ ಮಿಜಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೋಹಿಣಿ, ವಾಗ್ಮಿ ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ಮರಿಯಡ್ಕ ರಮೇಶ್ ಶೆಟ್ಟಿ, ಮಿಜಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರು ಎಂ. ಎನ್., ಕೆಪಿಎಸ್ ಸ್ಕೂಲ್ ಮುಖ್ಯಶಿಕ್ಷಕಿ ಅಪೋಲಿನ್ ಪಿಂಟೊ, ರೇಖಾ ಸುರೇಶ್ ಶೆಟ್ಟಿ, ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಭಾಗವಹಿಸಿದ್ದರು. ಸತೀಶ್ ಹೊಸ್ಮಾರ್ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1986653634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.