ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲ್ಲಂಗಡಿ

Last Updated 12 ಫೆಬ್ರುವರಿ 2018, 10:31 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಎಂ.ಜಿ.ರಸ್ತೆ, ಟಾಂಗಾಕೂಟ, ದೊಡ್ಡಪೇಟೆ, ಮೋರ್‌ ಬಳಿ, ಮೇಡ್ಲೇರಿ ರಸ್ತೆ, ಸಿದ್ಧೇಶ್ವರ ನಗರ, ಹಳೇ ಎಲ್‌ಐಸಿ, ರಾಷ್ಟ್ರೀಯ ಹೆದ್ದಾರಿ, ದುರ್ಗಾ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಶಿವರಾತ್ರಿ ನಿಮಿತ್ತ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣುಗಳು ಭಾನುವಾರ ಲಗ್ಗೆ ಇಟ್ಟಿವೆ.

‘ಜಿಲ್ಲೆಯಲ್ಲಿ ಕಲ್ಲಂಗಡಿ ಇಳುವರಿ ಕಡಿಮೆಯಾಗಿದ್ದು, ತಮಿಳುನಾಡಿನಿಂದ ಸುಮಾರು 15ರಿಂದ 20 ಲಾರಿಗಳನ್ನು ನಗರಕ್ಕೆ ತರಿಸಲಾಗಿದೆ. ಹೀಗಾಗಿ, ಬೆಲೆ ಹೆಚ್ಚಾಗಿದ್ದು ಪ್ರತಿ ಕೆಜಿಗೆ ₹ 20 ರಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ಕಲ್ಲಂಗಡಿ ವ್ಯಾಪಾರಿ ಸಮೀವುಲ್ಲಾ ಖೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣಿನ ದರ: ಕಲ್ಲಂಗಡಿ ಪ್ರತಿ ಕೆಜಿಗೆ ₹ 20, ಕರಬೂಜ (ಒಂದಕ್ಕೆ) ₹ 20ರಿಂದ ₹30, ಬಾಳೆಹಣ್ಣು (ಡಜನ್‌) ₹40ರಿಂದ ₹50 , ದಾಳಿಂಬೆ (ಕೆಜಿಗೆ) ₹120, ಶೇಬು (ಕೆಜಿಗೆ) ₹140, ಕಿತ್ತಳೆ (ಕೆಜಿಗೆ) ₹ 80, ಚಿಕ್ಕು(ಕೆಜಿಗೆ) ₹120, ಮೋಸಂಬಿ (ಕೆಜಿಗೆ) ₹120, ದ್ರಾಕ್ಷಿ (ಕೆಜಿಗೆ) ₹100 ರಿಂದ ₹140 ಇದ್ದು, ಸೇವಂತಿಗೆ ಮಾಲೆಗೆ ₹20 ರಿಂದ ₹30ರ ವೆರೆಗೆ ನಗರದಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT