ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಮೊಂತಿ ಫೆಸ್ಟ್‌, ಓಣಂ

ತಾಲ್ಲೂಕು ವ್ಯಾಪ್ತಿಯ ವಿವಿಧ ಚರ್ಚ್‌ಗಳಲ್ಲಿ ತೆನೆಹಬ್ಬ ಆಚರಣೆ; ಹೆಚ್ಚಿದ ಓಣಂ ಸಂಭ್ರಮ
Last Updated 9 ಸೆಪ್ಟೆಂಬರ್ 2022, 4:21 IST
ಅಕ್ಷರ ಗಾತ್ರ

ಮಂಗಳೂರು: ಕನ್ಯಾ ಮರಿಯಮ್ಮನವರ ಜನ್ಮದಿನವಾಗಿ ಆಚರಿಸುವ ಮೊಂತಿ ಫೆಸ್ಟ್ ಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು.

ಚರ್ಚ್‌ ಧರ್ಮಗುರುಗಳು, ಆಯಾ ಊರಿನ ಗುರಿಕಾರರು ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚ್‌ಗೆ ಕೊಂಡೊಯ್ದು ಆಶೀರ್ವದಿಸಿದ ಬಳಿಕ ಪವಿತ್ರ ಬಲಿಪೂಜೆ ನಡೆಯಿತು. ಮಕ್ಕಳು ಚರ್ಚ್‌ಗಳಿಗೆ ತೆರಳಿ ಮರಿಯಮ್ಮನವರ ಮೂರ್ತಿಗೆ ಹೂ ಸಮರ್ಪಿಸಿದರು.

ಬಲಿ ಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು. ನಂತರ ಭತ್ತದ ತೆನೆಗಳನ್ನು ಎಲ್ಲರಿಗೂ ವಿತರಿಸಲಾಯಿತು.‌ ಹೂ ಕೊಂಡು ಹೋಗಿದ್ದ ಮಕ್ಕಳಿಗೆ ಹಾಗೂ ಭಕ್ತರಿಗೆ ಸಿಹಿ ಹಾಗೂ ಕಬ್ಬು ಹಂಚಲಾಯಿತು

ಉಳ್ಳಾಲ ತಾಲ್ಲೂಕಿನಾದ್ಯಂತ ವಿವಿಧ ಚರ್ಚ್‍ಗಳಲ್ಲಿ ಗುರುವಾರ ಸಂಭ್ರಮದ ಕ್ರೈಸ್ತರ ತೆನೆಹಬ್ಬದ (ಮೋಂತಿ ಪೆಸ್ತ್) ಸಲುವಾಗಿ ದಿವ್ಯಬಲಿಪೂಜೆ, ವಿಶೇಷ ಪ್ರಾರ್ಥನೆ ಮತ್ತು ತೆನೆ, ಕಬ್ಬು ವಿತರಣೆ ಆಶೀರ್ವಚನ ಕಾರ್ಯಕ್ರಮ ನಡೆಯಿತು.

ಪಾನೀರು ದಯಾಮಾತೆಯ ಚರ್ಚ್‌ನಲ್ಲಿ ದೇರಳಕಟ್ಟೆ ಹೋಮಿಯೋಪತಿ ಸಂಸ್ಥೆಯ ಆತ್ಮಿಕ ನಿರ್ದೇಶಕ ರೆ.ಫಾ. ಜಾನ್ ವಾಸ್ ಪಾನೀರು ಚರ್ಚಿನ ಧರ್ಮ ಗುರುಗಳಾದ ರೆ. ಫಾ. ವಿಕ್ಟರ್ ಡಿಮೆಲ್ಲೊ ಹಬ್ಬದ ಮಹತ್ವವನ್ನು ಕ್ರೈಸ್ತ ಬಾಂಧವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್‌ ಅಲೋಶಿಯಸ್ ಕಾಲೇಜ್ ಕೋಟೆಕಾರ್ ಇದರ ಧರ್ಮ ಗುರು ರೆ. ಫಾ. ಜೋಯಲ್ ಫೆರ್ನಾಂಡಿಸ್ ರೆ. ಫಾ. ಜೈಸನ್ ಮಾರ್ಟಿಸ್, ಪಾನೀರು ರ್ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಸರಿಟಾ ಡಿಸೋಜಾ, ಕಾರ್ಯದರ್ಶಿ ಗ್ರೆಟ್ಟ ಡಿ ಕುನ್ನ ಕ್ರೈಸ್ತ ಧರ್ಮ ಭಗಿನಿಯರು ಭಾಗವಹಿಸಿದ್ದರು.

ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬಾಸ್ತಿಯನ್‍ ಧರ್ಮಕೇಂದ್ರದಲ್ಲಿ ಪ್ರಧಾನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೊ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಸಹಾಯಕ ಧರ್ಮಗುರು ಫಾ. ಸ್ಟೀವನ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮೊಂತೇರೊ, ಕಾರ್ಯದರ್ಶಿ ಫಿಲೋಮಿನಾ ಡಿಸೋಜಾ ಇದ್ದರು.

ಎಲಿಯಾರುಪದವು ಪವಿತ್ರ ಶಿಲುಬೆಯ ಚರ್ಚ್‍ನಲ್ಲಿ ಧರ್ಮಗುರು ಫಾ. ಜಾನ್ ಡಿಸೋಜ ಬಲಿಪೂಜೆ ನೆರವೇರಿಸಿದರು. ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜಾ, ಕಾರ್ಯದರ್ಶಿ ಮೆಟಿಲ್ಡಾ ರೋಚ್ ಇದ್ದರು.

ರಾಣಿಪುರ ಕ್ವಿನ್ ಮೇರಿ ಚರ್ಚ್‍ನಲ್ಲಿ ಧರ್ಮಗುರು ಫಾ. ಜಯಪ್ರಕಾಶ್ ಡಿಸೋಜ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಋಷಿವನ ಆರ್ಚ್‍ವರ್ಲ್ಡ್ ಗೋನ್ಸಾಲ್ವಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಆಲ್ವಿನ್ ಡಿಸೋಜ, ಕಾರ್ಯದರ್ಶಿ ನಿರ್ಮಾ ಲೋಬೋ ಇದ್ದರು.

ಕೋಟೆಕಾರ್ ಸ್ಟೆಲ್ಲಾ ಮಾರಿಸ್ ಕಾನ್ವೆಂಟ್ ಚಾಪೆಲ್‍ನಲ್ಲಿ ಋಷಿವನದ ಕಾರ್ಮೆಲ್ ಧರ್ಮ ಗುರು ವಂ. ಜೋ ತಾವ್ರೋ ಅವರು ನೆರವೇರಿಸಿ ಹೊಸ ಭತ್ತದ ತೆನೆಗಳನ್ನು ಆಶೀರ್ವದಿಸಿದರು. ಭಗಿನಿ ನಿರ್ಮಲಿನಿ , ಸ್ಟೆಲ್ಲಾ ಮಾರಿಸ್ ಕಾನ್ವೆಂಟ್‍ನ ಮುಖ್ಯಸ್ಥರಾದ ಭಗಿನಿ ಸ್ಮಿತಾ ಇದ್ದರು.

ಗೋವಿಂದದಾಸ ಕಾಲೇಜು: ಓಣಂ ವೈಭವ ಕಾರ್ಯಕ್ರಮ

ಸುರತ್ಕಲ್: ಪ್ರಾಕೃತಿಕ ವೈಭವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಓಣಂ ಹಬ್ಬ ನಾಡದೊರೆ ಮಹಾಬಲಿಯನ್ನು ಸ್ವಾಗತಿಸುವ ವಿಶಿಷ್ಟ ಹಬ್ಬ ಎಂದು ಗೋವಿಂದದಾಸ ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ನುಡಿದರು.

ಸುರತ್ಕಲ್ ಗೋವಿಂದದಾಸ ಕಾಲೇಜಿನ ಸ್ನಾತಕೋತ್ತರ ‌ಎಂಕಾಂ ವಿಭಾಗ ಆಯೋಜಿಸಿದ್ದ ಓಣಂ ವೈಭವ ಕಾರ್ಯಕ್ರಮ ‌ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಿ ಕಲಾ ಪರಿಣತಿ ಮೆರೆದರು. ವಿದ್ಯಾರ್ಥಿನಿಯರು ತಿರುವಾದಿರ ನೃತ್ಯ ವೈಭವ, ಕೇರಳ ಚೆಂಡೆ ವಾದನವನ್ನು ನುಡಿಸಿದರು. ವಿಶೇಷ ಖಾದ್ಯಗಳನ್ನು‌ ಹಂಚಲಾಯಿತು. ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ, ಸಜನ್ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT