ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ-ಮಿನಿ ಬಸ್, ಬೋಟ್‌ ಇಲ್ಲ; ರಿಕ್ಷಾ ದರ ಹೆಚ್ಚಳ

7
ಮುಲಾರಪಟ್ಣ-ಮುತ್ತೂರು ನಿವಾಸಿಗರ ಸಮಸ್ಯೆ

ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ-ಮಿನಿ ಬಸ್, ಬೋಟ್‌ ಇಲ್ಲ; ರಿಕ್ಷಾ ದರ ಹೆಚ್ಚಳ

Published:
Updated:
Deccan Herald

ಬಜ್ಪೆ: ಮುಲಾರಪಟ್ಣ ಸೇತುವೆ ಕುಸಿದ ಬಳಿಕ ಆ ಭಾಗದ ಜನರು ಎದುರಿಸುತ್ತಿರುವ ಮೂಲಸಮಸ್ಯೆಗಳಿಗೆ ಇದುವರೆಗೂ ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. ನದಿಯ ಎರಡೂ ಕಡೆಯ ಜನರು ಈಗಲೂ ತೂಗುಸೇತುವೆ ಮೂಲಕ ನಡೆದುಕೊಂಡೇ ಬಸ್‌ಗಾಗಿ ಮುಲಾರಪಟ್ಣ , ಮುತ್ತೂರಿಗೆ ತೆರಳಬೇಕಿದೆ.

ಜೂನ್ 25ರಂದು ಫಲ್ಗುಣಿ ನದಿ ಸೇತುವೆ ಕುಸಿದು ಬಿದ್ದ ಬಳಿಕ ಎರಡೂ ಕಡೆಯಲ್ಲೂ ತೂಗುಸೇತುವೆವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಇದರಲ್ಲಿ ಮುಂದುವರಿದು, ತಾತ್ಕಾಲಿಕ ನಿಲ್ದಾಣದವರೆಗೆ ಬಸ್‌ಗಳು ಪ್ರಯಾಣಿಕರಿಗೆ ಲಭ್ಯವಾಗಬೇಕು. ಆದರೆ ಮುತ್ತೂರು ಕಡೆಯಿಂದ ತಾತ್ಕಾಲಿಕ ನಿಲ್ದಾಣಕ್ಕೆ ಬಸ್‌ಗಳು ಸಾಗುತ್ತಿದ್ದರೂ, ಅತ್ತ ಮುಲಾರಪಟ್ಣದಿಂದ ತೂಗುಸೇತುವೆವರೆಗೆ ಬಸ್‌ಗಳಿಲ್ಲ. 

ಮರೆತ ಆಶ್ವಾಸನೆ: ಸೇತುವೆ ಕುಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮುಲಾರಪಟ್ಣದ ಜನರಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿದ್ದರು. ಅದರಂತೆ ಅತ್ತ ಎರಡು ಸರ್ಕಾರಿ ಬಸ್‌ಗಳು  ಲಭ್ಯ ಇವೆ. ಆದರೆ ಇವುಗಳು ಜನರ ಅನುಕೂಲಕ್ಕೆ ಲಭ್ಯ ಇಲ್ಲ. ಮುಲಾರಪಟ್ಣದಿಂದ ತೂಗುಸೇತುವೆವರೆಗೆ ಈ ಬಸ್‌ಗಳು ಸಾಗಬೇಕಿದ್ದರೂ, ಮುಲಾರಪಟ್ಣದಲ್ಲೇ ನಿಲುಗಡೆಯಾಗುತ್ತಿದ್ದು, ಆಟೊರಿಕ್ಷಾಗಳ ದುಪ್ಪಟ್ಟು ಬಾಡಿಗೆ ವ್ಯವಹಾರಕ್ಕೆ ನೆರವಾಗುತ್ತಿವೆ ಎಂಬುದು ಪ್ರಯಾಣಿಕರ ಅಹವಾಲು. ‘ಬಸ್‌ಗಳಿಗೆ ಈ ರಸ್ತೆಯಲ್ಲಿ ತಿರುಗಲು ರಸ್ತೆ ಕಿರಿದಾಗಿದ್ದರೆ, ಆ ಮಾರ್ಗದಲ್ಲಿ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದಂತೆ ಮಿನಿ ಬಸ್‌ಗಳ ಓಡಾಟ ಸಾಧ್ಯವಿಲ್ಲವೇ’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಜಿಲ್ಲಾಧಿಕಾರಿ ತಿಳಿಸಿದ ಬೋಟುಗಳು ಮಳೆಗಾಲದಲ್ಲಿ  ಇಲ್ಲಿಗೆ ಬಂದೇ ಇಲ್ಲ ಎನ್ನುತ್ತಾರೆ ನದಿ ದಾಟಲಾಗದೆ ನೊಂದ ಪ್ರಯಾಣಿಕರು.

ವಾರದಲ್ಲಿ ಜನರ ಪ್ರಯತ್ನ: ಇನ್ನು ಒಂದು ವಾರದಲ್ಲಿ ಮುರಿದ ಸೇತುವೆ ಬದಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯೊಂದರ ಮೂಲಕ ಜನರು ಅತ್ತಿಂದಿತ್ತ ಸಂಚರಿಸಲು ಯೋಚಿಸುತ್ತಿದ್ದಾರೆ. ಒಂದೊಮ್ಮೆ ಅಂತಹ ವ್ಯವಸ್ಥೆ ಆರಂಭಗೊಂಡರೆ ಜಿಲ್ಲಾಡಳಿತ, ಮತ್ತೊಂದು ಮಳೆಗಾಲ ಆರಂಭದವರೆಗೆ ಇಲ್ಲಿ ಸೇತುವೆ ನಿರ್ಮಾಣದ ಯೋಚನೆಯನ್ನೇ ಕೈಬಿಡಬಹುದು. ತೂಗುಸೇತುವೆ ಇಲ್ಲದಿದ್ದರೆ, ಈ ಭಾಗದ ಜನರು ಈಗಾಗಲೇ ನಿರಂತರ ಹೋರಾಟ ನಡೆಸಿ ತಮ್ಮ ಕೆಲಸ ಪೂರೈಸಿಕೊಳ್ಳುತ್ತಿದ್ದರು’ ಎಂದು ಮುಲಾರಪಟ್ಣದ ನಿವಾಸಿಯೊಬ್ಬರು ಹೇಳುತ್ತಾರೆ.

‘ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿದ ಕೂಡಲೇ ಮತ್ತೆ ಮುಲಾರಪಟ್ಣ ಸೇತುವೆ ಬಳಿ ಎಂದಿನಂತೆ ಮರಳುಗಾರಿಕೆ ನಡೆಯಲು ಈಗಲೇ ಸಿದ್ಧತೆಗಳು ನಡೆಯುತ್ತಿವೆ. ಆಗ ಬಸ್‌ಗಳು ಸಂಚರಿಸದ ಈ ರಸ್ತೆಯಲ್ಲಿ ನೂರಾರು ಲಾರಿಗಳು ಸಂಚರಿಸಲಿವೆ ಎಂಬುದು ವಿಶೇಷ’ ಇದು ಜನರ ಆಕ್ರೋಶಕ್ಕೂ ಕಾರಣವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !