ಮೂಲ್ಕಿ: ಬೈಕ್ ಕಳವು ಪ್ರಕರಣದ ಆರೋಪಿಗಳನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಕಳುವಾಗಿದ್ದ ಬೈಕ್ ಹಾಗೂ 2 ಮೊಬೈಲ್ ಫೋನ್ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್ ಮುಕ್ಕದ ಮೊಹಮ್ಮದ್ ರಾಝಿಕ್ (36 ವರ್ಷ), ಬೈಕಂಪಾಡಿ ಅಂಗರಗುಂಡಿಯ ಉಬೈದತ್ ಹೈದರ್ (31) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

2026ರ ಮೇ 18ರಂದು ಮೂಲ್ಕಿ ಜಂಕ್ಷನ್ ಬಳಿಯ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಿದ ಹೋಂಡಾ ಯುನಿಕಾರ್ನ್ ಬೈಕ್ ಕಳವಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮೊಹಮ್ಮದ್ ರಾಝಿಕ್ ವಿರುದ್ಧ ಸುರತ್ಕಲ್ ಠಾಣೆ, ಪಣಂಬೂರು ಠಾಣೆ ಹಾಗೂ ಮೂಲ್ಕಿ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಆರೋಪಿ ಉಬೈದತ್ ಹೈದರ್ ವಿರುದ್ಧ ಅಕ್ರಮ ಕೂಟ ರಚಿಸಿ, ಮಾರಕಾಸ್ತ್ರ ಹಿಡಿದು ಗಲಭೆ ನಡೆಸಿದ್ದೂ ಸೇರಿದಂತೆ ವಿವಿಧ ಆರೋಪಗಳಡಿ ಪಣಂಬೂರು ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ಈ ಹಿಂದೆ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-1679701643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.