ಮೂಲ್ಕಿ: ‘ಪ್ರಿಯದರ್ಶಿನಿ ಸಹಕಾರ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಧೃಢತೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದೆ. ಅನೇಕ ಮಹಿಳೆಯರಿಗೆ ಸಹಾಯಹಸ್ತ ಚಾಚುತ್ತಾ ಲೋಕ ಕಲ್ಯಾಣದ ಕೆಲಸ ನಡೆಸುತ್ತಿದೆ’ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿಯ ಪ್ರಿಯದರ್ಶಿನಿ ಕೊ– ಆಪರೇಟಿವ್ ಸೊಸೈಟಿಯ 5ನೇ ವರ್ಷದ ಸಂಭ್ರಮಾಚರಣೆಯಲ್ಲಿ ಸಹಾಯಹಸ್ತದ ಯೋಜನೆಯಲ್ಲಿ ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಿ ಅವರು ಮಾತನಾಡಿದರು.

ಮೀರಾ ಕಿಲ್ಪಾಡಿ, ಉಷಾ ಪಕ್ಷಿಕೆರೆ, ಮಾಲಿನಿ ನಾಯ್ಕ, ವಿಶಾಲಾಕ್ಷಿ ಆಚಾರ್ಯ ಕಿನ್ನಿಗೋಳಿ, ಸಿಂಚನಾ ಎರ್ಮಾಳ್ ಅವರಿಗೆ ಸುಮಾರು ₹50 ಸಾವಿರ ವೆಚ್ಚದ ಹೊಲಿಗೆಯಂತ್ರ ವಿತರಿಸಲಾಯಿತು.

ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆ ಸಂಯೋಜನೆಯಲ್ಲಿ ಹಳೆಯಂಗಡಿ ಹರಿಓಂ ಕಟ್ಟಡದ ಆವರಣದಲ್ಲಿ ಸಂಭ್ರಮಾಚರಣೆ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್. ರಮೇಶ್ ಉದ್ಘಾಟಿಸಿದರು. ತಜ್ಞ ಡಾ.ನಿತ್ಯಾನಂದ ಚೌಟ, ಡಾ.ಸುಧೀಂದ್ರ ಕಾರ್ನಾಡ್, ಡಾ.ಕೀರ್ತನ್ ರಾವ್, ಡಾ.ಉಣ್ಣಿಕೃಷ್ಣನ್ ನೈನಾರ್, ಡಾ.ಸಂಗೀತಾ ಭಟ್ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಇಸಿಜಿ ಸೇವೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಹಲ್ಲು ತಪಾಸಣೆ ನಡೆಸಲಾಯಿತು. ಕಣ್ಣು ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕ ವಿತರಿಸಲಾಯಿತು. ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶಿವಾನಂದ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಕೊ– ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ ಬೆರ್ನಾರ್ಡ್ ಸ್ವಾಗತಿಸಿದರು. ಮಂಗಳೂರಿನ ವುಡ್ಸೈಡ್ ಜನರಲ್ ಮ್ಯಾನೇಜರ್ ಎಚ್. ಭಾಸ್ಕರ ಸಾಲ್ಯಾನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮನ್ಸೂರ್ ಸಾಗ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಯೋಗೀಶ್ ಕೋಟ್ಯಾನ್ ತೋಕೂರು, ಸೊಸೈಟಿ ಉಪಾಧ್ಯಕ್ಷ ವಿಜಯ ಕುಮಾರ್ ಸನಿಲ್, ನಿರ್ದೇಶಕರು ಭಾಗವಹಿಸಿದ್ದರು. ಸೊಸೈಟಿಯ ಸಿಇಒ ಸುದರ್ಶನ್ ವಂದಿಸಿದರು. ಅಭಿಜ್ಞಾ ಜೈನ್, ಪ್ರಜ್ಞಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-1729535727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.