ಆಚಾರ ವಿಚಾರಗಳ ಮಂಥನ ನಡೆಯಲಿ

7
ಮೂಲ್ಕಿಯಲ್ಲಿ ಯೋಗೀಶ್ ಭಟ್ ಮಂಗಳೂರು

ಆಚಾರ ವಿಚಾರಗಳ ಮಂಥನ ನಡೆಯಲಿ

Published:
Updated:
Deccan Herald

ಮೂಲ್ಕಿ: ‘ಆಚಾರ ವಿಚಾರಗಳು ಶೃದ್ಧಾ ಭಕ್ತಿ ಅನ್ನ ಸಂತರ್ಪಣಾದಿ ಸೇವಾ ಕಾರ್ಯಗಳು ಕ್ಷೇತ್ರದ ಸಾನ್ನಿಧ್ಯ ವೃದ್ಧಿಯುಂಟು ಮಾಡುತ್ತದೆ’ ಎಂದು ಯೋಗೀಶ್ ಭಟ್ ಮಂಗಳೂರು ಹೇಳಿದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಾನುವಾರ ನಡೆದ ‘ಭಾಗ್ಯ ಸೂಕ್ತ ಅರ್ಚನೆ’, ಶ್ರೀಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನಡೆಯುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘಟಿತ ಪ್ರಯತ್ನ ದೇವರಲ್ಲಿ ಅಚಲ ಭಕ್ತಿ ಗುರು ಹಿರಿಯರಲ್ಲಿ ಗೌರವ ಹಾಗೂ ವಿಶ್ವಾಸ ಇವು ನಮ್ಮ ಕಾರ್ಯಗಳನ್ನು ಸುಗಮವಾಗಿ ನೆರವೇರುವಂತೆ ಮಾಡುತ್ತದೆ ಎಂದರು.

ಶ್ರೀ ಕ್ಷೇತ್ರದಲ್ಲಿ ಬ್ರಾಹ್ಮಣ ಆರಾಧನೆ, ಸುವಾಸಿನಿ ಆರಾಧನೆ, ವಟು ಆರಾಧನೆ, ಕನ್ನಿಕಾ ಆರಾಧನೆ ಸಹಿತ ಭೂರಿ ಸಮಾರಾಧನೆ ಹಾಗೂ ಮಹಾ ಮಂತ್ರಾಕ್ಷತೆ ನಡೆಯಿತು. ಕ್ಷೇತ್ರದ ಅರ್ಚಕ ವೃಂದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !