ಮೂಲ್ಕಿ: ಜಿಲ್ಲೆಯಲ್ಲಿ ಜನಗಣತಿಯ ಮೊದಲನೇ ಹಂತವನ್ನು ಪೂರ್ಣಗೊಳಿಸಿದ ಮೂಲ್ಕಿ ಪಟ್ಟಣ ಪಂಚಾಯಿತಿಯು ಗಣತಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಮೊದಲ ಹಂತವಾದ ಮನೆಗಳ ಪಟ್ಟಿ, ವಸತಿ ಗಣತಿ ಹಾಗೂ ಮನೆಯಲ್ಲಿರುವ ಸವಲತ್ತು, ಆಸ್ತಿ ಮತ್ತು ಕಟ್ಟಡದ ವಿವರ ಸಂಗ್ರಹ ಕಾರ್ಯವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಯಂ ಗಣತಿ ಮೂಲಕ ಏ.1ರಿಂದ 15ರವರೆಗೆ ನಡೆಸಲಾಗಿತ್ತು.

ಏ.6ರಿಂದ ಮೂಲ್ಕಿ ನಗರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮನೆ ಪಟ್ಟಿ ಮತ್ತು ವಸತಿ ಗಣತಿ ಮಾಡಲು ಮೂಲ್ಕಿ ನಗರವನ್ನು ಭೌಗೋಳಿಕವಾಗಿ 40 ಬ್ಲಾಕ್ಗಳಾಗಿ ರಚಿಸಿ, ಬ್ಲಾಕ್ಗಳಿಗೆ 32 ಗಣತಿದಾರರು, 6 ಮೇಲ್ವಿಚಾರಕರು ಹಾಗೂ ಜನಗಣತಿಯ ಚಾರ್ಜ್ ಅಧಿಕಾರಿಯಾಗಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಕೆ. ಅವರನ್ನು ನೇಮಿಸಲಾಗಿತ್ತು.

ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಗಣತಿ 2027ರ ಮೊದಲನೇ ಹಂತವನ್ನು ಪ್ರಥಮವಾಗಿ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಮೂಲ್ಕಿ ಪಟ್ಟಣ ಪಂಚಾಯಿತಿಗೆ ಲಭಿಸಿದೆ ಎಂದು ಜಿಲ್ಲಾಧಿಕಾರಿ ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಅವರು ಚಾರ್ಜ್ ಅಧಿಕಾರಿ ಮಧುಕರ್ ಕೆ., ಗಣತಿ ದಾರರಿಗೆ, ಮೇಲ್ವಿಚಾರಕರಿಗೆ, ಫೀಲ್ಡ್ ತರಬೇತುದಾರರಿಗೆ, ಅಧಿಕಾರಿಗಳನ್ನು ಅಭಿನಂಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-1105596573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.