ಯಕ್ಷಗಾನದ ಸಮಗ್ರ ಅಧ್ಯಯನ ಅಗತ್ಯ: ಹರಿಕೃಷ್ಣ ಪುನರೂರು

7
ಯಕ್ಷ ಕಾವ್ಯಾಂತರಂಗ -1

ಯಕ್ಷಗಾನದ ಸಮಗ್ರ ಅಧ್ಯಯನ ಅಗತ್ಯ: ಹರಿಕೃಷ್ಣ ಪುನರೂರು

Published:
Updated:
Deccan Herald

ಮೂಲ್ಕಿ: ‘ಇಂದಿನ ದಿನದಲ್ಲಿ ಯಕ್ಷಗಾನದ ಸಮಗ್ರ ಅಧ್ಯಯನ ಅಗತ್ಯವಾಗಿದೆ. ಯಕ್ಷಗಾನದ ಅಂತರಂಗವನ್ನು ತಿಳಿಸುವ ವಿವಿಧ ಕಮ್ಮಠ ಶಿಬಿರ ಪ್ರದರ್ಶನಗಳನ್ನು ನಡೆಸುತ್ತ ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರದ್ವತ ಯಜ್ಞಾಂಗಣದಲ್ಲಿ ಶುಕ್ರವಾರ ಯಕ್ಷ ಕಾವ್ಯಾಂತರಂಗ -1 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮವನ್ನು ತೆಂಕುತಿಟ್ಟಿನ ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು ಉದ್ಘಾಟಿಸಿದರು.

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಡಾ. ಯಾಜಿ ನಿರಂಜನ್ ಭಟ್,    ಯಕ್ಷಗಾನ ಅಕಾಡೆಮಿ ಸದಸ್ಯ ಬೊಟ್ಟಿಗೆರೆ ಪುರುಷೋತ್ತಮ ಪೂಂಜ, ಹೊಸತೋಟ ಮಂಜುನಾಥ ಭಾಗವತರು, ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ, ಬಹರೈನ್ ಯಕ್ಷಗಾನ ತಂಡದ ಸಲಹೆಗಾರ ರಮೇಶ್ ಮಂಜೇಶ್ವರ, ಕಲಾಪೋಷಕ ಯಾದವ ಕೋಟ್ಯಾನ್ ಪೆರ್ಮುದೆ, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್, ಕಲಾ ಪೋಷಕ ರಮೇಶ ಟಿ.ಎನ್. ಹಿರಿಯ ಪ್ರಸಂಗಕರ್ತ ಅರ್ಥಧಾರಿ ಶ್ರೀಧರ ಡಿ.ಎಸ್., ಪ್ರೊ.ಎಸ್.ವಿ. ಉದಯಕುಮಾರ್ ಶೆಟ್ಟಿ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಮಹೇಶ್ ಸುಳ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !