ಅಣಬೆ ಪೌಷ್ಟಿಕ ಆಹಾರ : ಶಿವಕುಮಾರ್ ಕಲ್ಲಡ್ಕ

7
‘ಮಶ್ರೂಮ್ ಕಲ್ಟಿವೇಷನ್‘ ಕಾರ್ಯಾಗಾರ

ಅಣಬೆ ಪೌಷ್ಟಿಕ ಆಹಾರ : ಶಿವಕುಮಾರ್ ಕಲ್ಲಡ್ಕ

Published:
Updated:
Deccan Herald

ವಿದ್ಯಾಗಿರಿ: ಈಗಿನ ಕಾಲದಲ್ಲಿ ಪೌಷ್ಟಿಕ ಆಹಾರದ ಬದಲು, ರುಚಿಕರ ಆಹಾರ ಸೇವನೆ ಹೆಚ್ಚಾಗಿದೆ. ಪೌಷ್ಠಿಕ ಆಹಾರದ ಕಡೆಗೆ ಗಮನ ಹರಿಸಲು ಇಂತಹ ಕಾರ್ಯಕ್ರಮಗಳು ಉಪಯೋಗವಾಗಿದೆ ಎಂದು ಅಣಬೆ ಕೃಷಿಕ ಶಿವಕುಮಾರ್ ಕಲ್ಲಡ್ಕ ಹೇಳಿದರು.

ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ‘ಮಶ್ರೂಮ್ ಕಲ್ಟಿವೇಷನ್‘ ಎಂಬ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಣಬೆ ಒಂದು ಸಸ್ಯಾಹಾರವಾಗಿದ್ದು, ಇದನ್ನು ಸೇವಿಸುವುದರಿಂದ ಪೌಷ್ಟಿಕಾಂಶ ದೊರೆಯುತ್ತದೆ. ಇದು ಒಂದು ಸಣ್ಣ ಜಾಗದಲ್ಲಿ ಮಾಡುವ ಕೃಷಿಯಾಗಿದೆ. ಇದರಲ್ಲಿ ಔಷಧೀಯ ಗುಣಗಳಿದ್ದು, ಮಧುಮೇಹ ಮತ್ತು ಕಡಿಮೆ ಕ್ಯಾಲೋರಿಯ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಅಣಬೆಯು ಇತ್ತೀಚಿನ ದಿನಗಳಲ್ಲಿ ಸೇವನೆಗೆ ಯೋಗ್ಯವಾಗಿದ್ದು, ಇದು ವಿಟಮಿನ್ ‘ಡಿ` ಮತ್ತು ಸಾರಜನಕ ಹೊಂದಿದೆ. ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಅಣಬೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸುತ್ತದೆ ಎಂದು ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿ.ಡಿ. ತಿಳಿಸಿದರು. ಸಸ್ಯಶಾಸ್ತ್ರ ಪ್ರಾಧ್ಯಾಪಕ ಅರುಣ್ ಕುಮಾರ್ ಮತ್ತು ಸಂಪನ್ಮೂಲ ವ್ಯಕ್ತಿ ಪ್ರೀತಮ್ ಉಪಸ್ಥಿರಿದ್ದರು. ವಿದ್ಯಾರ್ಥಿ ರೋಹಿತ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !