ಶುಕ್ರವಾರ, ಅಕ್ಟೋಬರ್ 18, 2019
27 °C
ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ

ಧರ್ಮಸ್ಥಳದಲ್ಲಿ ವೀಣೆಯ ಬೆಡಗು

Published:
Updated:

ಉಜಿರೆ: ‘ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಇದೇ 12 ಮತ್ತು 13ರಂದು ವೀಣೆಯ ಬೆಡಗು - ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ನಡೆಯಲಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.

ಇದೇ 12 ರಂದು ಸಂಜೆ 4 ರಿಂದ ಪ್ರೊ. ಅರವಿಂದ ಹೆಬ್ಬಾರ್ ಮತ್ತು ಬಳಗದವರಿಂದ ವೃಂದ ಗಾಯನ ನಡೆಯಲಿದೆ. ವಿದ್ವಾನ್ ಕೃಷ್ಣ ಪವನ್ ಕುಮಾರ್ ಮೃದಂಗ ವಾದಕರಾಗಿ ಸಹಕರಿಸುವರು. 5 ರಿಂದ ಡಾ. ಸಹನಾ, ಎಸ್.ವಿ. (ವೀಣೆ), ವಿದ್ವಾನ್ ಬಿ.ಎಸ್. ಪ್ರಶಾಂತ್ (ಮೃದಂಗ) ಮತ್ತು ವಿದ್ವಾನ್ ಟಿ.ಎನ್. ರಮೇಶ್ (ಘಟಂ) ಕಾರ್ಯಕ್ರಮ ನೀಡುವರು.  7 ರಿಂದ ಎ. ಕನ್ಯಾಕುಮಾರಿ (ಪಿಟೀಲು) ವಿದ್ವಾನ್ ಬಿ. ವಿಠಲ ರಂಗನ್ (ಸಹವಾದನ) ವಿದ್ವಾನ್ ಜಯಚಂದ್ರರಾವ್ (ಮೃದಂಗ), ವಿದ್ವಾನ್ ಎನ್. ಅಮೃತ್ (ಖಂಜರಿ) ಮತ್ತು ವಿದ್ವಾನ್ ಬಿ. ರಾಜಶೇಖರ್ (ಮೋರ್ಚಿಂಗ್) ಕಾರ್ಯಕ್ರಮ ನಡೆಸಿಕೊಡುವರು.

ಇದೇ 13 ರಂದು ಮಧ್ಯಾಹ್ನ 3.30 ರಿಂದ ವಿದ್ವಾನ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದ ಗಾಯನ ನಡೆಯಲಿದೆ. ವಿದುಷಿ ಸಿ. ಎಸ್. ಉಷಾ (ಪಿಟೀಲು) ಮತ್ತು ವಿದ್ವಾನ್ ಬಿ.ಎಸ್. ಆನಂದ್ (ಮೃದಂಗ) ಸಹಕರಿಸುವರು. ಸಂಜೆ 4.30 ರಿಂದ ಡಾ. ಗೀತಾ ಭಟ್ ಅವರಿಂದ ವೀಣಾವಾದನ ನಡೆಯಲಿದೆ. 5.30 ರಿಂದ ನೀಲಾ ರಾಂ ಗೋಪಾಲ್ ಅವರ ಗಾಯನ  ನಡೆಯಲಿದೆ. 7.30 ರಿಂದ ವಿದ್ವಾನ್ ರಾಮಕೃಷ್ಣನ್ ಮೂರ್ತಿ ಮತ್ತು ಬಳಗದಿಂದ ಸಂಗೀತ ಗಾಯನವಿದೆ.

ಪ್ರಶಸ್ತಿ ಪ್ರದಾನ: ಇದೇ 12 ರಂದು ಸಂಜೆ 6 ರಿಂದ ವಸಂತ ಮಹಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡುವರು.

ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ: ಪದ್ಮಶ್ರೀ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ (₹1ಲಕ್ಷ ನಗದು ಪುರಸ್ಕಾರ. ಪ್ರಾಯೋಜಕರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ). ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ: ಸಂಗೀತ ಕಲಾ ಆಚಾರ್ಯ, ಸಂಗೀತ ಕಲಾ ರತ್ನ ನೀಲಾ ರಾಂ ಗೋಪಾಲ್ (ಪುರಸ್ಕಾರ: ₹1 ಲಕ್ಷ  ನಗದು, ಪ್ರಾಯೋಜಕರು : ಎ.ಎಚ್. ರಾಮರಾವ್, ಅಧ್ಯಕ್ಷರು, ನ್ಯಾಷನಲ್ ಎಜ್ಯುಕೇಶನ್ ಸೊಸೈಟಿ ಮತ್ತು ಸುಧಾ ರಾಮರಾವ್, ಬೆಂಗಳೂರು).

Post Comments (+)