ಉಳ್ಳಾಲ: ‘ದೈವ- ದೇವರ ಸಾನ್ನಿಧ್ಯವನ್ನು ಬೆಳಗಿಸುವುದು ಹಾಗೂ ಪಾರಂಪರಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಎಲ್ಲರ ಜವಾಬ್ದಾರಿ’ ಎಂದು ಕಣಂತೂರಿನ ಆನುವಂಶಿಕ ಮೊಕ್ತೇಸರ ಎಂ. ಪದ್ಮನಾಭ ರೈ ಯಾನೆ ಮಂಜು ಭಂಡಾರಿ ನಾರ್ಯಗುತ್ತು ಹೇಳಿದರು.

ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಆದಿಬ್ರಹ್ಮ ಮೊಗೇರಕಳ ನಾರ್ಯದಲ್ಲಿ ಮೇ 8ರಂದು ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕ್ಷೇತ್ರದ ವಠಾರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪೂರ್ವಜರು ದೈವ- ದೇವರ ಆರಾಧನೆಯನ್ನು ಕೇವಲ ಆಚರಣೆಯಾಗಿ ನೋಡದೆ, ಅದನ್ನು ಜೀವನದ ಅವಿಭಾಜ್ಯ ಅಂಗವಾಗಿ ಬೆಳೆಸಿಕೊಂಡಿದ್ದಾರೆ. ಆ ಪರಂಪರೆಯನ್ನು ಕಾಪಾಡಿ, ಸಮಾಜದಲ್ಲಿ ಭಕ್ತಿ, ಶ್ರದ್ಧೆ ಮತ್ತು ಒಗ್ಗಟ್ಟನ್ನು ಬೆಳೆಸುವುದು ಅಗತ್ಯ. ದೈವದ ಸಾನಿಧ್ಯವು ದೇವಸ್ಥಾನಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರ ಮನಸ್ಸು ಮತ್ತು ನಡೆನುಡಿಗಳಲ್ಲಿ ಪ್ರತಿಫಲಿಸಬೇಕು. ಯುವ ಪೀಳಿಗೆಗೆ ಧಾರ್ಮಿಕ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ ಮೂಲಕ ಈ ಪವಿತ್ರ ಪರಂಪರೆಯನ್ನು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಬು ಎನ್., ಯಶವಂತ್ ದೇರಾಜೆ, ಬಾಲಕೃಷ್ಣ ಶೆಟ್ಟಿ ಕೆಳಗಿನ ನಾರ್ಯ, ಸುಮಲತಾ ಕೊಣಾಜೆ, ಸುಮನಾ ಹರೀಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಪ್ರಮುಖರಾದ ಭಾಸ್ಕರ್ ಕೋಟ್ಯಾನ್, ಹುಕ್ರಪ್ಪ, ಚಂದ್ರಶೇಖರ್ ಕಲ್ಲಾಪು, ಸತೀಶ್ ಜೋಗಿ ಬದ್ಯಾರು, ಸತೀಶ್ ಪೂಜಾರಿ ಸಜಿಪ ಮುನ್ನೂರು, ಹರೀಶ್ ಕೂಟತ್ತಜೆ, ಮುರಳೀಧರ್ ಕೊಣಾಜೆ, ಪದ್ಮನಾಭ ಗಟ್ಟಿ ಕೊಣಾಜೆ ಭಾಗವಹಿಸಿದ್ದರು.

ಸುಧೀರ್ ಬಾಳೆಪುಣಿ ಸ್ವಾಗತಿಸಿದರು. ರಾಘವ ಎನ್.ಟಿ.ಕಕ್ಕೆಮಜಲು ನಿರೂಪಿಸಿದರು. ಭೋಜಾನಂದ ನಾರ್ಯ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-29-2122210360

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.