ಮಂಗಳವಾರ, ಸೆಪ್ಟೆಂಬರ್ 28, 2021
22 °C

ಉಗ್ರರ ಜೊತೆಗೆ ನಂಟು: ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆ ಮೇಲೆ ಎನ್‌ಐಎ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉಗ್ರರ ಜೊತೆ ನಂಟು ಆರೋಪದ ಹಿನ್ನೆಲೆ ಮಾಜಿ ಶಾಸಕರೊಬ್ಬರ ಮಗನ ಮನೆ ಮೇಲೆ ಬುಧವಾರ ಎನ್‌ಐಎ ದಾಳಿ ನಡೆಸಿದೆ.

ಬೆಂಗಳೂರಿನಿಂದ ಬಂದ ಎನ್‌ಐಎ ಅಧಿಕಾರಿಗಳ ತಂಡ ಮಾಜಿ ಶಾಸಕ ಬಿ. ಎಂ ಇದಿನಬ್ಬ ಅವರ ಮಗ ಬಿ. ಎಂ ಪಾಷ ಅವರ ಉಳ್ಳಾಲದಲ್ಲಿರುವ ಮನೆ ಮೇಲೆ ದಾಳಿ ನಡೆಸಿದೆ.

ಸಿರಿಯ ಮೂಲದ ಐಸಿಸ್‌‌ ಉಗ್ರರೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ಬಿ.ಎಂ ಪಾಷಾ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಕಟ್ಟೆಗೆ ಆಗಮಿಸಿದ್ದು, ಎನ್‌ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡಾ ಭದ್ರತೆ ಒದಗಿಸಿದ್ದಾರೆ.

ಇದಿನಬ್ಬ ಅವರ ಪುತ್ರ ಬಿ.ಎಂ ಬಾಷಾ ಅವರು ಮಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌‌‌ ವ್ಯವಹಾರ ನಡೆಸುತ್ತಿದ್ದರು.

ಹತ್ತು ವರ್ಷಗಳ ಹಿಂದೆ ಇದಿನಬ್ಬ ಅವರ ಪುತ್ರಿಯೊಬ್ಬಳು ಕೇರಳದಲ್ಲಿ ನಾಪತ್ತೆಯಾಗಿದ್ದು, ಐಸಿಸ್‌ ಸಂಘಟನೆ ಸೇರಿದ್ದಾಗಿ ಹೇಳಲಾಗಿತ್ತು.
ಐಸಿಸ್‌ ಸಂಪರ್ಕ ಹಾಗೂ ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಯುವಕರೊಂದಿಗೆ ಮೊಬೈಲ್‌‌ ಸಂಪರ್ಕ ಇರುವ ಮಾಹಿತಿಯ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು