ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ ಜಾರಿಯಾಗುವ ಸಂದರ್ಭದಲ್ಲಿ ರೈತರ ಭೂಸ್ವಾಧೀನ, ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಬೇಕು ಅನ್ನುವ ಉದ್ದೇಶದಿಂದ ಯಾವ ಹಿಂದೂ ಸಂಘಟನೆಗಳು ಹೋರಾಡಲಿಲ್ಲ. ಬದಲಾಗಿ ಡಿವೈಎಫ್ಐ ನಂತಹ ಎಡಪಂಥೀಯ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿವೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದರು.

ಡಿವೈಎಫ್ಐ ಕುತ್ತಾರು ಬಟ್ಟೆದಡಿ ಘಟಕ ವತಿಯಿಂದ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರನ್ನಿಡುವ ಕೆಲಸಕ್ಕೆ ಮುಂದಾಗುವ ಜನರಿಗೆ ಇದರಿಂದ ಕರಾವಳಿಗರ ಬದುಕು ಬದಲಾಗುತ್ತಾ ಎನ್ನುವ ಯೋಚನೆಗಳಿಲ್ಲ. ಬೀದರ್, ಕಲಬುರಗಿ ಜಿಲ್ಲೆಗಳಂತೆ ಮಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಜನ ವಿದೇಶಗಳಿಗೆ ಗುಳೆಹೋಗುತ್ತಿದ್ದಾರೆ. ಮುಂಬೈನಲ್ಲಿ ಹೊಟೇಲ್ ಉದ್ಯಮ ಎನ್ನುವುದು ಕರಾವಳಿಗರ ಗುಳೆಗೆ ಇನ್ನೊಂದು ಹೆಸರಾಗಿದೆ ಎಂದು ಹೇಳಿದರು.

ಕರಾವಳಿಯಲ್ಲಿ ಕೋಮುಬಣಗಳಿಂದ ಹೂಡಿಕೆಗಳಾಗುತ್ತಿಲ್ಲ ಅನ್ನುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಹೇಳಿದ್ದರು. ಆದರೂ ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಸಾಹಿತಿಗಳು, ಬರಹಗಾರರು, ಚಳವಳಿಗಾರರು, ಪತ್ರಕರ್ತರು ಒಗ್ಗಟ್ಟಾಗಬೇಕಿದೆ. ಸರ್ಕಾರದ ತಪ್ಪುಗಳನ್ನು ತಿಳಿಸುವ ಕಾರ್ಯವನ್ನು ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕಿದೆ ಎಂದರು.

ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದ್ವೇಷ ಭಾಷಣ ಮಾಡಿದ ಆರೋಪದಡಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ 17 ಪ್ರಕರಣ ದಾಖಲಾಗಿದ್ದು, 16 ಪ್ರಕರಣಗಳಿಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ದೊರೆತಿದೆ. ಅದನ್ನು ತೆರವು ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಮೂರು ವರ್ಷಗಳಲ್ಲಿ 40ಕ್ಕೂ ಹೆಚ್ಚು ದ್ವೇಷಭಾಷಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಈ ಕುರಿತು ಡಿವೈಎಫ್ಐ, ಎಡಪಂಥಧ ಸಂಘಟನೆಗಳು ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ ಮಾಡಿವೆ ಎಂದರು.

ಭೂಸುಧಾರಣೆ ಕಾಯ್ದೆಯಿಂದ ಭೂಮಿ ಪಡೆದುಕೊಂಡ ಹಿಂದುಳಿದ ಸಮುದಾಯಗಳು ಉದ್ಯೋಗ, ವಾಣಿಜ್ಯ ವಿಷಯಗಳಿಂದ ದೂರವಿರಬೇಕು ಅನ್ನುವ ಉದ್ದೇಶದಿಂದ ಹಿಂದುತ್ವ ಆರಂಭವಾಯಿತು. ಹಿಂದುಳಿದ ವರ್ಗದವರು ಇದೀಗ ದೇವಸ್ಥಾನಗಳ ಸ್ವಯಂಸೇವಕರಾಗಿ, ಬ್ರಹ್ಮಕಲಶೋತ್ಸವದಲ್ಲಿ ಪಾರ್ಕಿಂಗ್ ನಿರ್ವಹಣೆ, ಜಾತ್ರೆಗಳಲ್ಲಿ ಅನ್ನದಾನದ ಕೆಲಸ, ಸ್ವಚ್ಛತೆಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುವಲ್ಲಿ ಆರ್ಎಸ್ಎಸ್ ಯಶಸ್ವಿಯಾಗಿದೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಉಳ್ಳಾಲ ತಾಲ್ಲೂಕು ಸಮಿತಿ ಕಾರ್ಯದರ್ಶಿ ರಿಜ್ವಾನ್ ಹರೇಕಳ, ಜಿಲ್ಲಾ ಮುಖಂಡ ಸುನೀಲ್ ತೇವುಲ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.