ಸೋಮವಾರ, ಫೆಬ್ರವರಿ 17, 2020
29 °C

ಉಡ್ಡಯನಕ್ಕೆ ಕೆಡೆಟ್‌ಗಳ ಲಗ್ಗೆ; ಮಂಗಳೂರಿನ ಬಾನಂಗಳಕ್ಕೆ ಎನ್‌ಸಿಸಿ ಏರ್‌ವಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಎರಡು ದಶಕಗಳಿಂದ ಕರಾವಳಿಯಲ್ಲಿ ಎನ್‌ಸಿಸಿ ಏರ್‌ವಿಂಗ್ ಪ್ರೌಢಶಾಲಾ ತರಬೇತು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಾನಂಗಳಕ್ಕೆ ನೆಗೆದು ಗಮನ ಸೆಳೆಯುತ್ತಿವೆ.

ಮೂಡುಬಿದಿರೆ ಆಳ್ವಾಸ್‌ ಎಂಜಿನಿಯರಿಂಗ್ ಕಾಲೇಜು ಮೈದಾನಾದಲ್ಲಿ ನಡೆಯುತ್ತಿರುವ ವಾರ್ಷಿಕ ಎನ್‌ಸಿಸಿ ತರಬೇತಿ ಶಿಬಿರದಲ್ಲಿ ನಗರದ ಸೆಂಟ್‌ ಅಲೋಶಿಯಸ್ ಪ್ರೌಢಶಾಲೆ ವಿದ್ಯಾರ್ಥಿಗಳಾದ ಸ್ಟೀವ್, ಜೋಶಲ್, ಜಿಯಾ, ಜನನಿ ಹಾಗೂ ಶೈನಾ ಅವರು ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಸುನಿಲ್ ಲೋಬೋರವರ ಮಾರ್ಗದರ್ಶನದಲ್ಲಿ ಉಡ್ಡಯನದ ಅನುಭವಗಳನ್ನು ಪಡೆದಿದ್ದಾರೆ.

ಈ ಬಾರಿ ಉಡ್ಡಯನ ತರಬೇತಿಯೊಂದಿಗೆ, ಯುವ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಕರಾವಳಿಯ ಈ ಶಿಬಿರದಲ್ಲಿ ಮಾಡಲಾಗುತ್ತಿದೆ. ಅತ್ಯಂತ ಕಿರಿಯ ಮಯಸ್ಸಿನಲ್ಲಿ ತಮಗೆ ದೊರೆತ ಅವಕಾಶ ಹಾಗೂ ಪ್ರೋತ್ಸಾಹಕ್ಕೆ ವಾಯುದಳದ ತರಬೇತುದಾರ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮಾ ಹಾಗೂ ತಂಡಕ್ಕೆ ನೀಡಿದ ಉಡ್ಡಯನ ತರಬೇತಿ ಅವಿಸ್ಮರಣೀಯ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ.

ಎಳೆಯ ವಯಸ್ಸಿನಲ್ಲಿಯೇ ಎನ್‌ಸಿಸಿ ಏರ್‌ವಿಂಗ್ ಯುವ ಪ್ರತಿಭೆಗಳಿಗೆ ನೀಡುತ್ತಿರುವ ಅಪೂರ್ವ ಅವಕಾಶವಾಗಿದೆ. ಸಶಕ್ತ ಪ್ರತಿಭೆಗಳನ್ನು ಗುರುತಿಸಿ, ಭವಿಷ್ಯದ ವಿಭಾಗಗಳಿಗೆ ಆರಿಸಲು ಇದೊಂದು ಸದವಕಾಶವಾಗಿದೆ ಎಂದು ತರಬೇತುದಾರರು ಹಾಗೂ ಪಾಲಕರು ಅಭಿಪ್ರಾಯಪಟ್ಟಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು