ಭಾನುವಾರ, ಡಿಸೆಂಬರ್ 8, 2019
25 °C

ಆಳ್ವಾಸ್‌ನ 10 ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಎನ್‌ಡಿಎ-2 ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪುಣೆಯ ಕಡಕ್ವಾಸ್ಲದಲ್ಲಿರುವ ಎನ್‌ಡಿಎ ತರಬೇತಿ ಸಂಸ್ಥೆಯಲ್ಲಿ ಬಿಟೆಕ್ ಅಥವಾ ಬಿಎಸ್‌ಸಿ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆ ಇದಾಗಿದ್ದು, ಆಳ್ವಾಸ್ ಪದವಿ ಪೂರ್ವಕಾಲೇಜಿನ ಮಹೇಶ್ ಎಂ.ಕಂಪಲಿ, ನಿರಂಜನ್ ಎಸ್. ಪಟ್ಟಣಶೆಟ್ಟಿ, ಶ್ರೀನಿವಾಸ್ ಎನ್., ಪ್ರಶಾಂತ್ ಎಸ್. ಸತ್ತರಗಿ, ಸಂತೋಷ್ ಎಸ್. ಮುದೆನೂರ್, ಶಶಿಧರ್ ಗೌಡ ಕೆ.ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ಎಸ್. ‌ನಾಡಿಗಿರ್,ಪ್ರಮತ್ ಪಿ.ಮೂಗಿ, ಸುಹಾನ್‌ ಜೆ . ಬಂಗೇರ ತೇರ್ಗಡೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)