ಮಂಗಳವಾರ, ಆಗಸ್ಟ್ 20, 2019
22 °C
ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ  

ನೆಲ್ಯಾಡಿ: ಬುಲೆಟ್ ಟ್ಯಾಂಕರ್ ಪಲ್ಟಿ, ಗ್ಯಾಸ್ ಸೋರಿಕೆ

Published:
Updated:

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಮೀಪ ನೇಲ್ಯಡ್ಕ ಎಂಬಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ, ಗ್ಯಾಸ್ ಸೋರಿಕೆ ಆಗಲಾರಂಭಿಸಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ನಿರ್ಮಿಸಲಾಗಿದೆ.      

ಗ್ಯಾಸ್ ತುಂಬಿಸಿಕೊಂಡು ಮಂಗಳೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಲಾರಿ ಚಾಲಕ ತಮಿಳುನಾಡಿನ ಫಣಿರಾಜ ಎಂಬವರು ಗಾಯಗೊಂಡಿದ್ದಾರೆ.              

ಗ್ಯಾಸ್ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ನೀಡಲಾಗಿದ್ದು, ಉಪ್ಪಿನಂಗಡಿ-ಕಡಬ-ನೆಟ್ಟಣ ಮೂಲಕ ಗುಂಡ್ಯಕ್ಕೆ ಪರ್ಯಾಯ ರಸ್ತೆಯಾಗಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

Post Comments (+)