ನೆಲ್ಯಾಡಿ (ಉಪ್ಪಿನಂಗಡಿ): ಮೊಬೈಲ್ ನೆಟ್ವರ್ಕ್ ಇಲ್ಲದೆ ಶಿರಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಚೇರಿಯಿಂದ ಹೊರ ಬಂದು ಕೆಲಸ ನಿರ್ವಹಿಸಬೇಕಾದ ಸ್ಥಿತಿ ಎದುರಾಗಿದೆ.

ಕಡಬ ತಾಲ್ಲೂಕಿನ ಶಿರಾಡಿ, ಉದನೆ, ನೆಲ್ಯಾಡಿ, ಕೊಯಿಲ ಭಾಗದಲ್ಲಿ 10 ದಿನಗಳಿಂದ ನೆಟ್ವರ್ಕ್ ಸಮಸ್ಯೆ ಕಾಡುತ್ತಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಗಾಗ ಸಂಪರ್ಕ ಕಡಿತಗೊಳ್ಳುವುದರಿಂದ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು ನಾಲ್ಕು ಗಂಟೆ ಕಾಲ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ಇದರಿಂದಾಗಿ ತುರ್ತು ಕರೆ, ವಾಟ್ಸ್ಆ್ಯಪ್ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಯುಪಿಐ ಪಾವತಿ ಸ್ಥಗಿತಗೊಂಡು ಅಂಗಡಿ-ವ್ಯಾಪಾರಸ್ಥರು ಹಾಗೂ ಗ್ರಾಹಕರು ತೊಂದರೆಗೀಡಾಗುತ್ತಿದ್ದಾರೆ.

ಪಂಚಾಯಿತಿ ಸಿಬ್ಬಂದಿ ಬೀದಿಗೆ: ಉದನೆಯಲ್ಲಿ ಕಾರ್ಯಾಚರಿಸುತ್ತಿರುವ ಶಿರಾಡಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಕಚೇರಿಯಿಂದ ಹೊರ ಬಂದು, ರಸ್ತೆಯಲ್ಲಿ ಅಥವಾ ಎತ್ತರದ ಜಾಗಕ್ಕೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಎತ್ತಿಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಒಟಿಪಿಗಾಗಿ ಕಾಯುತ್ತಾ ನಿಲ್ಲಬೇಕಾದ ಸ್ಥಿತಿ ಎದುರಿಸುತ್ತಿ ದ್ದಾರೆ. ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣ, ಬ್ಯಾಂಕಿಂಗ್ ವ್ಯವಹಾರ, ತುರ್ತು ವೈದ್ಯಕೀಯ ಸಂಪರ್ಕ ಹಾಗೂ ಆನ್ಲೈನ್ ವ್ಯವಹಾರ ಸಾಧ್ಯವಾಗದೆ ಸ್ಥಳೀಯರು ಅಸಹಾಯಕರಾಗಿದ್ದಾರೆ.

ಕನಿಷ್ಠ ಕಾಳಜಿಯೂ ಇಲ್ಲ: ಕರೆನ್ಸಿ ಅವಧಿ ಮುಗಿಯುವುದರ ಒಳಗೆ ರಿಚಾರ್ಜ್ ಮಾಡಿಸಲು ಕರೆ ಮಾಡಿ ದುಂಬಾಲು ಬೀಳುವ ಕಂಪನಿಯ ಸಿಬ್ಬಂದಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಕನಿಷ್ಠ ಕಾಳಜಿ ತೋರುವುದಿಲ್ಲ. ಕಂಪನಿಯವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ‘ನಿಮಗೆ ನಮ್ಮ ದೂರವಾಣಿ ಸಂಖ್ಯೆ ಕೊಟ್ಟವರನ್ನೇ ಕೇಳಿ’ ಎಂದು ಉಡಾಫೆಯಿಂದ ಉತ್ತರಿಸಿ ಕರೆ ಕಡಿತಗೊಳಿಸುತ್ತಾರೆ ಎಂದು ಗ್ರಾಹಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಉದನೆ ಪೇಟೆಯಲ್ಲಿ ಕೆಲವೊಮ್ಮೆ ಮನೆ ಹೊರಗೆ, ರಸ್ತೆಗೆ ಬಂದು ನಿಂತರೂ ನೆಟ್ವರ್ಕ್ ಸಿಗುವುದಿಲ್ಲ. ವೈಫೈ ಹಾಕಿದ್ದರೂ ಅದರ ಪ್ರಯೋಜನವೂ ದೊರಕುತ್ತಿಲ್ಲ. ವ್ಯಾಪಾರ, ವ್ಯವಹಾರ ನಡೆಯದಂತಾಗಿದೆ. ಕಂಪನಿಯವರು ಗ್ರಾಮೀಣ ಜನರ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಉದನೆಯ ವರ್ತಕ ಮ್ಯಾಥ್ಯು ಟಿ.ಜೆ. ದೂರಿದರು.

ಪಂಚಾಯಿತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ: ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಆನ್ಲೈನ್ ಮೂಲಕ ನಡೆಯುತ್ತಿದ್ದು, ಪ್ರತಿಯೊಂದಕ್ಕೂ ಒಟಿಪಿ ಮುಖ್ಯ. ಆದರೆ, ಒಟಿಪಿಯೇ ಬರುತ್ತಿಲ್ಲ. ಸಾರ್ವಜನಿಕರು ದಿನ ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕಚೇರಿಯ ಹೊರಗೆ ಅಥವಾ ರಸ್ತೆ ಬದಿಗೆ ಮೊಬೈಲ್ ಹಿಡಿದುಕೊಂಡು ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಈಗಾಗಲೇ ಮೊಬೈಲ್ ಕಂಪನಿ ಯೊಂದರ ಬೆಂಗಳೂರು ಕಚೇರಿಗೆ ದೂರು ಸಲ್ಲಿಸಿದ್ದೇನೆ ಎಂದು ಶಿರಾಡಿ ಪಿಡಿಒ ಯಶವಂತ ಬೆಳ್ಚಡ ಹೇಳಿದರು.

ಪರಿಶೀಲನೆ ನಡೆಸಿ ಕ್ರಮ: ‘ದೀರ್ಘ ಕಾಲದ ಸಮಸ್ಯೆ ಆಗಿದ್ದರೆ ಅಥವಾ ಟವರ್ ಅಳವಡಿಸಬೇಕಿದ್ದರೆ ಶೀಘ್ರ ದಲ್ಲೇ ಕ್ರಮಕೈಗೊಳ್ಳಲಾಗದು. ಅದರ ಹೊರತಾಗಿ ಇರುವ ಸಮಸ್ಯೆ ಬಗೆಹರಿ ಸಲು ಜಿಲ್ಲೆಯ ಅಧಿಕಾರಿಗೆ ತಿಳಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮೊಬೈಲ್ ಕಂಪನಿಯೊಂದರ ಜನರಲ್ ಮ್ಯಾನೇಜರ್ ದೀಪಕ್ ಪಿ.ವಿ. ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-29-2094559886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.