ನೆಲ್ಯಾಡಿ (ಉಪ್ಪಿನಂಗಡಿ): ‘ಸಾವು– ಬದುಕಿನ ನಡುವಿನ ಸಂಕಷ್ಟದ ಕ್ಷಣಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜೀವ ಸೇವೆಯಲ್ಲಿ ತೊಡಗಿರುವ ಆಂಬುಲೆನ್ಸ್ ಚಾಲಕರ ಸೇವೆ ಅಮೂಲ್ಯವಾದದ್ದು. ಸಮಾಜವು ಅವರ ತ್ಯಾಗ, ಸೇವೆಯನ್ನು ಗೌರವಿಸಬೇಕು’ ಎಂದು ಧರ್ಮಗುರು ಫಾ. ಶಾಜಿ ಮ್ಯಾಥ್ಯು ಹೇಳಿದರು.

ಇಲ್ಲಿನ ಸೇಂಟ್ ಅಲ್ಫೋನ್ಸ ಚರ್ಚ್ ಎಸ್.ಎಂ.ವೈ.ಎಂ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಂಬುಲೆನ್ಸ್ ಚಾಲಕರಾದ ಪಿ. ಮೊಹಮ್ಮದ್ ಮಸೂದ್, ಅಬ್ದುಲ್ ಸಮದ್, ಪ್ರಜ್ವಲ್ ಪಿ.ಜೆ. ಅವರನ್ನು ಸನ್ಮಾನಿಸಲಾಯಿತು.

ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮ್ಯಾಥ್ಯು, ಯುವಜನ ಸಂಘದ ದಿಶಾ, ಜಿತು, ಕ್ರೆಡಿಟ್ ಯೂನಿಯನ್ನ ಶಿಬು, ವಿನ್ಸೆಂಟ್ ಡಿಪೌಲ್ ಸಂಘದ ಸಣ್ಣಿ ಭಾಗವಹಿಸಿದ್ದರು. ಜಿನೋಜ್ ಸ್ವಾಗತಿಸಿದರು. ಬೆರಿಲ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-29-1648952750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.