ನೆಲ್ಯಾಡಿ (ಉಪ್ಪಿನಂಗಡಿ): ‘ನೆಲ್ಯಾಡಿ ಗ್ರಾಮದ ಪುಳಿತ್ತಡಿ ಎಂಬಲ್ಲಿ ಕೃಷಿ ಜಮೀನಿನ ಪಕ್ಕದಲ್ಲಿ ಹೊಳೆ ಹರಿಯುತ್ತಿದ್ದು, ಕಳೆದ ಮಳೆಗಾಲದಲ್ಲಿ ತುಂಬಿ ಹರಿದ ಪರಿಣಾಮ 100 ಮೀಟರ್ ಉದ್ದದ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಹೊಳೆ ನೀರು ಜಮೀನಿಗೆ ಹರಿದು ಬರುತ್ತಿರುವುದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಇದ್ದ ಕೃಷಿಯೂ ಹಾನಿಯಾಗುತ್ತಿದೆ. ತಡೆಗೋಡೆ ಮೇಲೆ ಇದ್ದ ಕಾಲುದಾರಿ ಕೊಚ್ಚಿ ಹೋಗಿ ಸ್ಥಳೀಯರಿಗೆ ಸಂಚರಿಸುವುದಕ್ಕೆ ತೊಂದರೆಯಾಗಿದೆ’ ಎಂದು ಗ್ರಾಮಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡರು.

ಮಂಗಳವಾರ ಶಾಸಕಿ ಭಾಗೀರಥಿ ಮುರುಳ್ಯ ನೆಲ್ಯಾಡಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಜಮಾಯಿಸಿದ್ದ ಗ್ರಾಮಸ್ಥರು ತಡೆಗೋಡೆ ರಚನೆ, ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ತಿಳಿಸಿದರು. ಸೇತುವೆ, ಕಾಲು ಸಂಕ ನಿರ್ಮಾಣಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಸುಮಾರು 100 ಎಕ್ರೆ ಕೃಷಿ ಮಳೆ ನೀರಿಗೆ ನಾಶವಾಗುತ್ತಿದೆ. ಕೃಷಿ ಹಾನಿಗೆ ಸರ್ಕಾರ ಪರಿಹಾರ ನೀಡಬೇಕು. ತಡೆಗೋಡೆ ಮೇಲೆ ಇರುವ ಕಾಲು ದಾರಿಯಲ್ಲಿ ಓಡಾಡುವುದಕ್ಕೆ ಅನುಕೂಲವಾಗುವಂತೆ ಹೊಳೆ ಬದಿಗೆ ತಡೆಗೋಡೆ ರಚನೆ ಮಾಡಿಕೊಡುವಂತೆ ರಾಜು ಗೌಡ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಈ ಬಗ್ಗೆ ಈಚೆಗೆ ಜಿಲ್ಲೆಗೆ ಬಂದಿದ್ದ ಸಚಿವ ಬೋಸರಾಜು ಅವರಿಗೆ ಮನವಿ ಮಾಡಲಾಗಿದೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ಗೋಳಿತ್ತೊಟ್ಟು ಗ್ರಾಮದ ಸಮರಗುಂಡಿ ಎಂಬಲ್ಲಿ ತೋಡಿನಲ್ಲಿ ಹರಿದು ಬರುವ ನೆರೆ ನೀರಿನಿಂದಾಗಿ ಧರೆ ಕುಸಿಯಲಾರಂಭಿಸಿದೆ. ಇದರ ಮೇಲಿರುವ ಮನೆ ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿ ವಾಸಿಸುವ ಗ್ರಾಮಸ್ಥರು, ಅಂಗವಿಕಲರು ಕಷ್ಟ ಪಡುತ್ತಿದ್ದಾರೆ. ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಮರಗುಂಡಿ ನಿವಾಸಿ ಬಿ.ಆರ್. ಜಯಂತಿ ಶೆಟ್ಟಿ ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಬಾಲಕೃಷ್ಣ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಪ್ರಮುಖರಾದ ಅಣ್ಣಿ ಎಲ್ತಿಮಾರ್, ರಮೇಶ್ ಶೆಟ್ಟಿ ಬೀದಿ, ಸುರೇಶ್ ಪಡಿಪಂಡ, ಬಾಲಕೃಷ್ಣ ತೋಟ, ನೆಲ್ಯಾಡಿ ಪಿಡಿಒ ಜಯರಾಜ್, ಕಾರ್ಯದರ್ಶಿ ಭಾರತಿ ಭಾಗವಹಿಸಿದ್ದರು.

ಟೋಲ್ ಫ್ರೀಗೆ ಮನವಿ: ಅಡ್ಡಹೊಳೆ– ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡಿದ್ದು, ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ಗೇಟ್ ನಿರ್ಮಾಣವಾಗಿದೆ. ಟೋಲ್ಗೇಟ್ ಸುತ್ತಲಿನ 10 ಕಿ.ಮೀ. ವ್ಯಾಪ್ತಿಗೆ ಟೋಲ್ ಫ್ರೀ ಎಂಬ ನಿಯಮವಿದೆ. ಈ ನಿಯಮ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಹೊಸಮಜಲುನಲ್ಲಿ ಪ್ರಾಥಮಿಕ ಶಾಲೆ, ಮಸೀದಿ, ಆಸ್ಪತ್ರೆ ಇದ್ದು ರಾಷ್ಟ್ರೀಯ ಹೆದ್ದಾರಿ ದಾಟಲು ಅನುಕೂಲವಾಗುವಂತೆ ‘ವಾಕಿಂಗ್ ಫೂಟ್ ಓವರ್’ ರಚನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಇಸ್ಮಾಯಿಲ್ ನೆಲ್ಯಾಡಿ ಮನವಿ ಮಾಡಿದರು. ಸಂಬಂಧಪಟ್ಟ ಎಂಜಿನಿಯರ್, ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸುವುದಾಗಿ ಶಾಸಕರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-887822383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.