ಉಳ್ಳಾಲ: ಭಾರತದಲ್ಲಿ ಕೆಲವು ನರ ಸಂಬಂಧಿ ರೋಗಗಳು ಯುವಕರಲ್ಲೂ ಕಂಡುಬರುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ ರೋಗಗಳ ಪರಿಣಾಮ ಕಾಣಿಸುತ್ತಿದ್ದು, ಚಿಕಿತ್ಸೆಯ ಕುರಿತ ಸಂಶೋಧನೆಗಳು ನಿರಂತರವಾಗಿವೆ ಎಂದು ಕೇರಳದ ಏಸ್ಟರ್ ಕ್ಲಸ್ಟರ್ನ ಪಾರ್ಕಿನ್ಸನ್ಸ್ ಆಂಡ್ ಮೂವ್ ಮೆಂಟ್ ಡಿಸಾರ್ಡರ್ಸ್ ಸೆಂಟರ್ ನಿರ್ದೇಶಕಿ ಡಾ.ಆಶಾ ಕಿಶೋರ್ ಹೇಳಿದರು.

ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ಗೆ ಸೇರಿದ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರವಿಜ್ಞಾನ ರೋಗಗಳನ್ನು ಗುರುತಿಸಲು ಈಗ ಕ್ಲಿನಿಕಲ್ ಪರೀಕ್ಷೆಗಳ ಜತೆಗೆ ಸಿ.ಟಿ.ಸ್ಕ್ಯಾನ್, ಬಯೋಗ್ರಾಂ ಸೇರಿದಂತೆ ಹಲವು ಆಧುನಿಕ ವಿಧಾನಗಳನ್ನು ಬಳಸಲಾಗುತ್ತಿದೆ. ಹೊಸ ಚಿಕಿತ್ಸೆ ವಿಧಾನಗಳು ಅಭಿವೃದ್ಧಿಯಾಗಿವೆ. ಚಿಕಿತ್ಸೆಯ ವೇಳೆ ಬರುವ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದು ಸವಾಲಾಗಿದೆ. ಈ ಕ್ಷೇತ್ರದಲ್ಲಿ ವೈದ್ಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಿದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ, ನಿಟ್ಟೆ ವಿ.ವಿಯಲ್ಲಿ ಸಂಶೋಧನಾ ವ್ಯವಸ್ಥೆ ಸಾಮಾನ್ಯ ಶಿಕ್ಷಣ ಪದ್ಧತಿಗಿಂತ ಭಿನ್ನವಾಗಿದ್ದು, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳು ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತವೆ. ಶಿಕ್ಷಣದ ಜತೆಗೆ ಸಮಾಜಮುಖಿ ಚಟುವಟಿಕೆ ಒಳಗೊಂಡ ವಿಸ್ತರಣಾ ಸೇವೆಗಳೂ ಮಹತ್ವದ ಪಾತ್ರವಹಿಸುತ್ತವೆ. ಮುಂದಿನ ವರ್ಷ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಪರಿಣಾಮಕಾರಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿಯ ಕುಲಸಚಿವ ಡಾ.ಹರ್ಷ ಹಲಹಳ್ಳಿ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಪರಿವೀಕ್ಷಕ ಇಮ್ಮಾದ್ ಮೊಹಮ್ಮದ್ ಇಸ್ಮಾಯಿಲ್ ಭಾಗವಹಿಸಿದ್ದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ಲೇಖಾ ಪಂಡಿತ್ ಸ್ವಾಗತಿಸಿದರು. ಡಾ.ಅಲೆಕ್ಸಾಂಡರ್ ಲೋಬೊ, ಡಾ.ಸುಹಾನ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ.ಸಂದೀಪ್ ರೈ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.