ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಐವರು ಧರ್ಮಗುರುಗಳಿಗೆ ದೀಕ್ಷೆ

Last Updated 29 ಏಪ್ರಿಲ್ 2022, 16:20 IST
ಅಕ್ಷರ ಗಾತ್ರ

ಮಂಗಳೂರು: ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಅವರು ಐವರು ಪಾದ್ರಿಗಳಿಗೆ ದೀಕ್ಷೆ ನೀಡಿದರು.

ಫಾದರ್ ಐವಾನ್ ಪೀಟರ್ ಕಾರ್ಡೆರೊ (ಅರ್ವ), ಫಾದರ್ ವಿಜಯ್ ಮೊಂತೆರೊ (ಬಣಕಲ್, ಮೂಡಿಗೆರೆ, ಚಿಕ್ಕಮಗಳೂರು), ಫಾದರ್ ವಿವೇಕ್ ದೀಪಕ್ ಪಿಂಟೊ (ಮಡಂತ್ಯಾರು), ಫಾದರ್ ಜಾನ್ಸನ್ ಡೆಂಜಿಲ್ ಪಿರೇರಾ (ವಾಮಂಜೂರು), ಮತ್ತು ಫಾದರ್ ವಿವಿಯನ್ ನಿಶಾಂತ್ ರೋಡ್ರಿಗಸ್ (ಕೊಲ್ಲಂಗಾಣ) ಅವರು ನೂತನ ಧರ್ಮಗುರುಗಳಾಗಿ ಆಯ್ಕೆಯಾದರು.

‘ಪಾದ್ರಿಗಳು ಸಂಸ್ಕಾರಗಳನ್ನು ಆಚರಿಸುವ ಮೂಲಕ ಪವಿತ್ರರಾಗುತ್ತಾರೆ. ಪಾದ್ರಿಯ ಪವಿತ್ರತೆಯು ಅವರ ದೌರ್ಬಲ್ಯಗಳನ್ನು ತೆಗೆದುಹಾಕುವುದಿಲ್ಲ. ಅವರು ತಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸುವ ಮೂಲಕ ಮತ್ತು ಸಂಪೂರ್ಣವಾಗಿ ಅವಲಂಬಿಸುವ ಮೂಲಕ ಶಕ್ತಿಯನ್ನು ಕಂಡುಕೊಳ್ಳಬೇಕು’ ಎಂದು ಪೀಟರ್ ಪಾವ್ಲ್ ಸಲ್ಡಾನ ಸಂದೇಶ ನೀಡಿದರು.

ಜೆಪ್ಪು ಸೇಂಟ್ ಜೋಸೆಫ್ ಸೆಮಿನರಿ ಪ್ರಾಧ್ಯಾಪಕ ರೆ.ಫಾ.ರಾಕ್ವಿನ್ ಪಿಂಟೊ ನೂತನವಾಗಿ ದೀಕ್ಷೆ ಪಡೆದ ಧರ್ಮಗುರುಗಳನ್ನು ಪರಿಚಯಿಸಿದರು. ವಿಕಾರ್ ಜನರಲ್ ಮ್ಯಾಕ್ಸಿಮ್‌ನ ಎಲ್. ನೊರೊನ್ಹಾ, ಕುಲಾಧಿಪತಿ ವಿಕ್ಟರ್ ಜಾರ್ಜ್ ಡಿಸೋಜ, ಸೆಮಿನರಿಯ ರೆಕ್ಟರ್ ಡಾ. ರೊನಾಲ್ಡ್ ಸೆರಾವೊ, ಕ್ಯಾಥೆಡ್ರಲ್ ರೆಕ್ಟರ್ ಆಲ್ಫ್ರೆಡ್ ಜೆ ಪಿಂಟೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT