ಕಾಸರಗೋಡು: ಮಲಪ್ಪುರಂನಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾಗಿರುವ ಸಂಬಂಧ ಕೆಲವು ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಯ ಅಂಗವಾಗಿ ಜಿಲ್ಲೆಯಲ್ಲೂ ತಪಾಸಣೆ ಮುಂದುವರಿದಿದೆ.

ಕುಂಬಳೆ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕ ಎಕೆಜಿ ನಗರದ ಕ್ವಾರ್ಟರ್ಸ್ ಒಂದಕ್ಕೆ ದಾಳಿ ನಡೆಸಿರುವ ತಂಡ ಆರ್.ಸಿ. ಪುಸ್ತಕ, ಮೂರು ವಿಸಿಟಿಂಗ್ ಕಾರ್ಡ್ ಸಹಿತ ಕೆಲವು ದಾಖಲೆಗಳನ್ನು ವಶಪಡಿಸಿದೆ.

ಫೆ. 7ರಂದು ಮಲಪ್ಪುರಂ ಜಿಲ್ಲೆಯ ತಿರೂರಂಗಾಡಿ ಎಂಬಲ್ಲಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಈರುಳ್ಳಿ ಚೀಲಗಳ ನಡುವೆ ಅಡಗಿಸಿಟ್ಟಿದ್ದ ಸ್ಫೋಟಕ ಸಾಮಗ್ರಿ ಪತ್ತೆಯಾಗಿದ್ದು, ಈ ಸಂಬಂಧ ಮುಹಮ್ಮದ್ ಸಲೀಂ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅತನ ಪತ್ನಿ ಮತ್ತು ಮಕ್ಕಳು ಕಟ್ಟತ್ತಡ್ಕದ ಕ್ವಾರ್ಟ್ರರ್ಸ್ನಲ್ಲಿ ತಂಗಿರುವ ಮಾಹಿತಿ ಆಧರಿಸಿ ಎನ್.ಐ.ಎ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಚ್ಚುವರಿ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಕೋಯಿಕೋಡ್, ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶನಿವಾರದಿಂದ ತನಿಖೆ ನಡೆಯುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-29-2021504533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.