ಸೋಮವಾರ, ಡಿಸೆಂಬರ್ 5, 2022
19 °C

ಎನ್‌ಐಟಿಕೆಯಲ್ಲಿ ‘ವಿಜ್ಞಾನ ಜ್ಯೋತಿ’ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್ ಎನ್‌ಐಟಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಪಾರ್ಕ್, ಜೆಎನ್‌ವಿ ದಕ್ಷಿಣ ಕನ್ನಡದ ಸಹಭಾಗಿತ್ವದಲ್ಲಿ ಎನ್‌ಐಟಿಕೆಯಲ್ಲಿ ವಿಜ್ಞಾನ ಜ್ಯೋತಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿನಿಯರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಹೆಚ್ಚಿಸಲು ಮತ್ತು ಯಾವುದೇ ಲಿಂಗ ಪಕ್ಷಪಾತವಿಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ವೈವಿಧ್ಯ ಕ್ಷೇತ್ರಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೇಂದ್ರೀಯ ಸಂಶೋಧನಾ ಸೌಲಭ್ಯಗಳ (ಸಿಆರ್‌ಎಫ್‌) ಬಗ್ಗೆ ತಿಳಿದುಕೊಂಡರು.

ಆಹಾರ ತ್ಯಾಜ್ಯ ಬಳಕೆಯಿಂದ ನಡೆಯುವ ಜೈವಿಕ ಅನಿಲ ಘಟಕ, ಡ್ರೋನ್‌ಗಳು, ಸಿಎಸ್‌ಡಿಯ ಉನ್ನತ ಥ್ರೀಡಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದರು. ಪ್ರಭಾರ ನಿರ್ದೇಶಕ ಪ್ರೊ. ಜೆ.ಸಿ.ಮೋಹನ್‌ಕುಮಾರ್, ಸ್ಟೆಪ್‌ ಸಂಯೋಜಕ ಪ್ರೊ. ಅರುಣ್ ಎಂ. ಇಸಳೂರ್, ಮುಡಿಪು ಜೆಎನ್‌ವಿ ಪ್ರಾಂಶುಪಾಲ ಪಿ. ರಾಜೇಶ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು