ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಮಂಗಳೂರು ಬಂದರಿಗೆ ಬಂದ ‘ಎರ್ಮಿನಿಯಾ‘ ಹಡಗು

ಭಾರಿ ಗಾತ್ರದ ಸರಕು ಸಾಗಣೆ ಹಡಗಿಗೆ ನೀರು ಹಾಯಿಸಿ ಸ್ವಾಗತ
Last Updated 3 ಜುಲೈ 2022, 15:36 IST
ಅಕ್ಷರ ಗಾತ್ರ

ಮಂಗಳೂರು: ಒಟ್ಟು 1,771 ಟಿಇಯುಗಳಷ್ಟು ಸರಕು ಹೊತ್ತ ಭಾರಿ ಗಾತ್ರದ ಸರಕು ಸಾಗಣೆ ಹಡಗು ‘ಎಂ.ಎಸ್.ಸಿ ಎರ್ಮಿನಿಯಾ’ ನವಮಂಗಳೂರು ಬಂದರಿಗೆ ಬಂದು ತಲುಪಿದೆ. ನೀರನ್ನು ಹಾಯಿಸುವ ಮೂಲಕ ಈ ಹಡಗನ್ನು ಭಾನುವಾರ ಗೌರವಯುತವಾಗಿ ಬಂದರಿಗೆ ಬರಮಾಡಿಕೊಳ್ಳಲಾಯಿತು.

ಈ ಹಡಗು 276.5 ಮೀ.ಉದ್ದವಿದೆ. ಇದರ ಅಗಲ 32.2 ಮೀ. ಕೊಲಂಬಿಯಾದಿಂದ ಬಂದಿರುವ ಎರ್ಮಿನಾ ಹಡಗಿನಲ್ಲಿ 1265 ಆಮದು ಸರಕು ಪೆಟ್ಟಿಗೆಗಳು ಹಡಗಿನಲ್ಲಿದ್ದವು. ಕ್ಯಾ.ಆರ್‌.ಡಿ.ಪಾಯಸ್‌ ಹಾಗೂ ಕ್ಯಾ.ರಜನಿಕಾಂತ್‌ ಈ ಹಡಗಿನ ಪೈಲಟ್‌ಗಳಾಗಿದ್ದಾರೆ.

ಹಡಗಿನಿಂದ ಸರಕು ಪೆಟ್ಟಿಗೆಗಳನ್ನು ಇಳಿಸುವ ಕಾರ್ಯಕ್ಕೆ ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಅವರು ಚಾಲನೆ ನೀಡಿದರು. ಬಂದರಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಜೆಎಸ್‌ಡಬ್ಲ್ಯು ಅಧಿಕಾರಿಗಳು ಇದ್ದರು.

‘ಭಾರಿ ಗಾತ್ರದ ಸರಕು ಸಾಗಣೆ ಹಡಗುಗಳು (ಮದರ್‌ ಶಿಪ್‌) ನೇರವಾಗಿ ನವಮಂಗಳೂರು ಬಂದರಿಗೆ ನೇರವಾಗಿ ಸರಕನ್ನು ಸಾಗಿಸುವುದಿಲ್ಲ. ಕೊಚ್ಚಿ ಬಂದರಿಗೆ ಬರುವ ದೊಡ್ಡ ಹಡಗಿನಿಂದ ಸರಕನ್ನು ಸಣ್ಣ ಹಡಗುಗಳಿಗೆ ವರ್ಗಾಯಿಸಿ ನಂತರ ನವ ಮಂಗಳೂರು ಬಂದರಿಗೆ ತರಲಾಗುತ್ತದೆ. ಆದರೆ, ಸರಕು ಪೆಟ್ಟಿಗೆಗಳನ್ನು ಹೊತ್ತ ಎರ್ಮಿನಿಯಾ‌ ಹಡಗು ನೇರವಾಗಿ ನವ ಮಂಗಳೂರು ಬಂದರಿಗೆ ಬಂದಿದೆ’ ಎಂದು ಎನ್‌ಎಂಪಿಎ ಮೂಲಗಳು ತಿಳಿಸಿವೆ.

ಪನಾಮಾದ ಈ ಹಡಗನ್ನು 1993ರಲ್ಲಿ ನಿರ್ಮಿಸಲಾಗಿದೆ. ಗರಿಷ್ಠ 3720 ಟಿಇಯುಗಳಷ್ಟು ಸರಕನ್ನು ಸಾಗಿಸುವ ಸಾಮರ್ಥ್ಯ ಈ ಹಡಗಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT