ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ | ಲಯನ್ಸ್‌ನಿಂದ ನಿಸ್ವಾರ್ಥ ಸೇವೆ: ಸಂಜೀತ್ ಶೆಟ್ಟಿ

ಕುಕ್ಕೆ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ
Last Updated 19 ಮಾರ್ಚ್ 2023, 7:27 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ‘ಸಮಾಜಸೇವಾ ಚಟುವಟಿಕೆಗಳನ್ನೇ ಉದ್ದೇಶವಾಗಿರಿಸಿಕೊಂಡಿರುವ ಲಯನ್ಸ್ ಸಂಸ್ಥೆ ‌‌ಗ್ರಾಮೀಣ ಪ್ರದೇಶದ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಲಯನ್ಸ್‌ನಿಂದ ನಿಸ್ವಾರ್ಥ ಸೇವೆ ಸಿಗುವಂತಾಗಲಿ’ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್. ಸಂಜೀತ್ ಶೆಟ್ಟಿ ಹೇಳಿದರು.

ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸೇವಾ ಕಾರ್ಯದಲ್ಲಿ ಜಿಲ್ಲೆಗೆ ಮಾದರಿಯಾಗಿದೆ. ಒಂದೂವರೆ ವರ್ಷವನ್ನು ಪೂರೈಸಿರುವ ‌ಸಂಸ್ಥೆ ಸೇವಾ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ಸ್ಥಾನ, ಆಡಳಿತ ವಿಭಾಗದಲ್ಲಿ ಐದನೇ ಸ್ಥಾನ ಹೊಂದಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ ಆರ್. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ಲಟ ವಸಂತಕುಮಾರ ಶೆಟ್ಟಿ, ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ರ, ವಲಯ ಅಧ್ಯಕ್ಷ ಡಾ. ಸಿದ್ದಲಿಂಗ, ಮುಖ್ಯ ವಿಸ್ತರಣಾ ಚೇರ್‌ಮನ್ ಜಯರಾಮ ದೇರಪಜ್ಜನ ಮನೆ, ಪ್ರಗತಿ ಸಂಜಿತ್ ಶೆಟ್ಟಿ ಇದ್ದರು.

ವಿಮಲಾ ರಂಗಯ್ಯ ಅವರು ನೀಡಿದ ಧ್ವನಿವರ್ಧಕ, ಸತೀಶ ಕೂಜುಗೋಡು ನೀಡಿದ ಊಟದ ತಟ್ಟೆ ಸ್ಟಾಂಡ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿಗೆ ನೀಡಲಾಯಿತು. ದಿನೇಶ್ ಮೊಗ್ರ, ಸ್ವಾತಿ ಮೊಗ್ರ, ವಿಮಲಾ ರಂಗಯ್ಯ, ದೀಪಕ್ ಎಚ್.ಬಿ, ಬಿಪಿನ್ ಜಾಕೆ ಸುಬ್ರಹ್ಮಣ್ಯದ ಯುವ ತೇಜಸ್ ಸಂಸ್ಥೆಗೆ ಆಂಬುಲೆನ್ಸ್ ನಿರ್ವಹಣಾ ವೆಚ್ಚ ಕೊಡುಗೆಯಾಗಿ ನೀಡಿದರು. ಗುರುಪ್ರಸಾದ್ ದಂಪತಿ, ದೇವರಗದ್ದೆ ಅಂಗನವಾಡಿಗೆ ಆಟದ ಸಾಮಾನು ಇಡಲು ಕಪಾಟು ವ್ಯವಸ್ಥೆಗೊಳಿಸಿದರು. ಮಿಕ್ಸಿ ಕೊಡುಗೆಯಾಗಿ ನೀಡಿದರು.

ಯುವ ಬರಹಗಾರ, ಅಂಗವಿಕಲ ಉಲ್ಲಾಸ್ ಕಜ್ಜೋಡಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯಪಾಲರು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ. ಕೆ.ಆರ್.ಶೆಟ್ಟಿಗಾರ್, ಕಾರ್ಯದರ್ಶಿ ಸತೀಶ ಕೂಜುಗೋಡು, ಹಾಗೂ ಕೋಶಾಧಿಕಾರಿ ರಾಮಚಂದ್ರ ಪಳಂಗಾಯ ಅವರನ್ನು ನೀಡಿ ಗೌರವಿಸಿದರು. ವಿಮಲಾ ರಂಗಯ್ಯ ನಿರೂಪಿಸಿದರು. ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ. ಕೆ. ಆರ್. ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ ಕೂಜುಗೋಡು ವರದಿ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT