ನೆಲ್ಯಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪ ಎಂಜಿರ ಎಂಬಲ್ಲಿ ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿದ್ದಾರೆ.
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಸಿಆರ್‌ಸಿ ಕಾಲೊನಿ ನಿವಾಸಿ ಮನೋಜ್ (20) ಮೃತರು. ಅದೇ ಕಾಲೊನಿಯ ಸಚಿನ್ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಡಾರ್ಕ್ ರೈಡರ್ಸ್ ಹೆಸರಿನಲ್ಲಿ ಕುಂಬ್ರದಿಂದ 10 ಬೈಕ್‌ಗಳಲ್ಲಿ 15 ಮಂದಿ ಹಾಸನದ ಹೊಸಹಳ್ಳಿ ಗುಡ್ಡಕ್ಕೆ ಬೈಕ್ ರ‍್ಯಾಲಿ ಹೊರಟಿದ್ದರು. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಠಾರದಲ್ಲಿ ಚಾಲನೆ ನೀಡಲಾಗಿತ್ತು.
ಆರಂಭದಲ್ಲೇ ಮಗುಚಿಬಿದ್ದ ಮೂರು ಬೈಕ್‌ಗಳು: ಕುಂಬ್ರದಲ್ಲಿ ಬೈಕ್ ರ‍್ಯಾಲಿ ಉದ್ಘಾಟನೆಗೆ ಕೆಲವೇ ನಿಮಿಷಗಳ ಮೊದಲು ನಿಲ್ಲಿಸಲಾಗಿದ್ದ ಮೂರು ಬೈಕ್‌ಗಳು ಒಂದರ ಮೇಲೊಂದು ಬಿತ್ತು.
ಮತ್ತೊಬ್ಬನಿಗೆ ಗಾಯ: ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಂಡದಲ್ಲಿದ್ದ ಇತರ ಸವಾರರು ಬೈಕ್‌ಗಳನ್ನು ತಿರುಗಿಸಿ ವಾಪಸ್ ಬರುವಾಗ ಚೇತನ್ ಕುಮಾರ್ ಎಂಬುವರ ಬೈಕ್ ಸ್ಕಿಡ್ ಆಗಿ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.