‘ಷೇರು ವ್ಯವಹಾರಕ್ಕೆ ಸಂಬಂಧಿಸಿದ ಕೊಂಡಿಯೊಂದು ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿದ್ದು, ಅದನ್ನು 2024ರ ಜುಲೈ 1ರಂದು ಕ್ಲಿಕ್ಕಿಸಿದ್ದೆ. ಅದರ ಮೂಲಕ ಬರ್ಕ್ಲೇಸ್ ಎಸ್‌ಐಎಲ್ ಕಂಪನಿಯ ಆ್ಯಪ್ ಡೌನ್‌ಲೋಡ್ ಮಾಡಿದ್ದೆ. ನಂತರ ಅದರ ಗ್ರಾಹಕ ಸೇವಾ ಚಾಟ್‌ಬಾಕ್ಸ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದ್ದರು. ಹೆಚ್ಚು ಲಾಭ ಗಳಿಸಬಹುದೆಂದು ಆಸೆ ತೋರಿಸಿದ್ದರು. ಅವರ ಸೂಚನೆ ಪ್ರಕಾರ ಜುಲೈ 1ರಿಂದ ಆ.12ರವರೆಗೆ ಹಂತ ಹಂತವಾಗಿ ₹ 34.40 ಲಕ್ಷ ಮೊತ್ತವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೆ. ಹಣ ಹಿಂಪಡೆಯಲು ಮುಂದಾದಾಗ ಶೇ 20ರಷ್ಟು ತೆರಿಗೆ ಕಟ್ಟುವಂತೆ ಸೂಚಿಸಿದರು. ನಂತರ ಹಣ ಹಿಂಪಡೆಯದಂತೆ ಆ್ಯಪ್‌ನಲ್ಲಿದ್ದ ನನ್ನ ಖಾತೆಯನ್ನು ಸ್ಥಗಿತ ಮಾಡಿದ್ದಾರೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.