ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಲಿಪಿ ಕಲಿಯುವ ಹಂಬಲವೇ? ಆನ್‌ಲೈನ್‌ ಪಾಠ ಆರಂಭಿಸಿದೆ ಸಂಘಟನೆ

ಭಾಷೆಯ ಮಾನ್ಯತೆಗೆ ಕರಾವಳಿಯಲ್ಲಿ ಹೆಚ್ಚಿದ ಸಿದ್ಧತೆ
Last Updated 29 ಆಗಸ್ಟ್ 2020, 3:11 IST
ಅಕ್ಷರ ಗಾತ್ರ

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಬೇಕು. ತುಳುವಿಗೆ ರಾಜ್ಯದ ಅಧಿಕೃತ ಭಾಷೆ ಸ್ಥಾನ ಸಿಗಬೇಕು ಎಂಬ ಒತ್ತಡಗಳು ಹೆಚ್ಚಾಗುತ್ತಿವೆ. ಇದೀಗ ತುಳುನಾಡಿನಲ್ಲಿ ಅನೇಕ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಇದೀಗ ಆಸಕ್ತರಿಗಾಗಿ ಆನ್‌ಲೈನ್‌ ಮೂಲಕ ತುಳು ಲಿಪಿ ಕಲಿಕೆಯನ್ನು ಆರಂಭಿಸಲಾಗಿದೆ.

6 ನೇ ತರಗತಿಯಿಂದ ಸ್ನಾತಕೋತ್ತರ ತರಗತಿಯವರೆಗೆ ತುಳು ಕಲಿಕೆಗೆ ಅವಕಾಶವಿದೆ. ಅದಾಗ್ಯೂ ತುಳು ಭಾಷೆಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ ಎನ್ನುವ ದೂರು ಇಲ್ಲಿನ ಜನರದ್ದು. ಅದನ್ನು ನಿವಾರಿಸುವ ಉದ್ದೇಶದಿಂದ ಈಗಾಗಲೇ ಆನ್‌ಲೈನ್‌ ಅಭಿಯಾನ ಸೇರಿದಂತೆ ಅನೇಕ ಹೋರಾಟಗಳನ್ನು ನಡೆಸಲಾಗಿದೆ.

ಇದೀಗ ತುಳು ಭಾಷೆಯ ಉತ್ತೇಜನಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟಿರುವ ಜೈ ತುಳುನಾಡ್‌‌ ಸಂಘಟನೆ, ಜನರಿಗೆ ತುಳು ಭಾಷೆಯನ್ನು ಆನ್‌ಲೈನ್‌‌ ಮೂಲಕ ಉಚಿತವಾಗಿ ಕಲಿಸುತ್ತಿದೆ. ಲಾಕ್‌ಡೌನ್‌‌ನ ನಡುವೆ ಮೂರು ತಿಂಗಳಿನಿಂದ ಭಾಷೆ ಕಲಿಯಲು ಉತ್ಸುಕರಾಗಿರುವ ಜನರಿಗೆ ಸಕ್ರಿಯವಾದ ತರಬೇತಿ ನೀಡುತ್ತಿದೆ.

‘ಕಳೆದ ಮೂರು ವರ್ಷಗಳಿಂದ ಶಾಲೆಗಳಲ್ಲಿ ತುಳುಲಿಪಿಗಳನ್ನು ಉಚಿತವಾಗಿ ಕಲಿಸುತ್ತಿದ್ದೇವೆ. ಕೋವಿಡ್‌–19 ನಿಂದಾಗಿ ಆನ್‌‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಆನ್‌‌ಲೈನ್‌ ಮೂಲಕ ತುಳುಲಿಪಿಯನ್ನು ಕಲಿಸಬಾರದೇಕೆ ಎನ್ನುವ ಆಲೋಚನೆ ನೀಡಿತು. ಹಲವಾರು ಮಂದಿ ತುಳು ಭಾಷೆಯನ್ನು ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು. ಆದರೆ, ಕೆಲವರಿಗೆ ನಾವು ಮಾಡುವ ಆನ್‌‌ಲೈನ್‌‌‌‌‌ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಬಳಿಕ ನಾವು ವಾಟ್ಸ್‌ಆ್ಯಪ್‌ ‌ಗ್ರೂಪ್‌ ಮೂಲಕ ಜನರಿಗೆ ತುಳು ಭಾಷೆ ಕಲಿಸುವ ಕಾರ್ಯ ಆರಂಭಿಸಿದ್ದೇವೆ’ ಎಂದು ಜೈ ತುಳುನಾಡ್‌‌ ಅಧ್ಯಕ್ಷ ಸುದರ್ಶನ್‌ ಹೇಳುತ್ತಾರೆ.

‘ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಮುಂಬೈ ತುಳುವರು ಹಾಗೂ ಕಾಸರಗೋಡು ತುಳುವರು ಎನ್ನುವ ಪ್ರತ್ಯೇಕವಾದ ಗ್ರೂಪ್‌‌ಗಳಿವೆ. ಮುಂಬೈನಲ್ಲಿ ನೆಲೆಸಿರುವ ತುಳುವರಿಗೆ ಕನ್ನಡ ವರ್ಣಮಾಲೆಗಳ ಬಗ್ಗೆ ತಿಳಿದಿಲ್ಲದ ಕಾರಣ, ಅವರಿಗೆ ಹಿಂದಿ ವರ್ಣಮಾಲೆಯ ಸಹಾಯದಿಂದ ಕಲಿಸಲಾಗುತ್ತದೆ. ಕಾಸರಗೋಡು ತುಳುವರು ಮಲಯಾಳ ವರ್ಣಮಾಲೆಗಳ ಸಹಾಯದಿಂದ ಕಲಿಯುತ್ತಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT