ಪಡುಬಿದ್ರಿ: ಪಡುಬಿದ್ರಿ-ಕಾಡಿಪಟ್ಣ ಜೀವನ್ ಸೇವಾ ಬ್ರಿಗೇಡ್ ವತಿಯಿಂದ ದಿ.ಜೀವನ್ ಎಸ್.ಸ್ಮರಣಾರ್ಥ ಶುಕ್ರವಾರ ಕಿಡ್ನಿ ತೊಂದರೆಗೆ ಒಳಗಾದ ಎಂಟು ಮಂದಿಗೆ ಸಹಾಯಹಸ್ತ ವಿತರಣಾ ಸಮಾರಂಭ ನಡೆಯಿತು.

‘ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 8 ಮಂದಿಗೆ ಈ ಬಾರಿ ಸಹಾಯಧನ ವಿತರಿಸಲಾಗಿದ್ದು, ಮೊದಲ ವರ್ಷ 2 ಮಂದಿ, ಕಳೆದ ವರ್ಷ 6 ಮಂದಿಗೆ ಸಹಾಯಹಸ್ತ ನೀಡಲಾಗಿದೆ. ಮುಂದಿನ ವರ್ಷ 10 ಮಂದಿಗೆ ಸಹಾಯಹಸ್ತ ನೀಡಲು ನಿರ್ಧರಿಸಲಾಗಿದೆ. ಈ ಬಾರಿ ₹ 1.20 ಲಕ್ಷ ಸಹಾಯಧನ ವಿತರಿಸಲಾಯಿತು’ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕಾಂಚನ್ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೊಗವೀರ ಕೋಅಪರೇಟಿವ್ ಬ್ಯಾಂಕ್ ನಿರ್ದೇಶಕ ವಿಜಯ ಕೆ.ಸಾಲ್ಯಾನ್, ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಸಿಹಿತ್ಲು ಕದಿಕೆ ಮೊಗವೀರ ಸಭಾ ಅಧ್ಯಕ್ಷ ಗಿರೀಶ್ ಕುಮಾರ್ ಶ್ರೀಯಾನ್, ಶಾಯನ್ ರಿಚರ್ಡ್ ಕೈಪುಂಜಾಲು, ಸಂತೋಷ್ ಶ್ರೀಯಾನ್ ಕೈಪುಂಜಾಲು, ಶಶಿಕಾಂತ್ ಪಡುಬಿದ್ರಿ ಹಾಜರಿದ್ದರು. ಸಹನಾ ಆರ್.ಮೆಂಡನ್ ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-28-316704395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.