ಉಳ್ಳಾಲ (ದಕ್ಷಿಣ ಕನ್ನಡ): ಆಂಬುಲೆನ್ಸ್ ವಾಹನ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಭಾನುವಾರ ಸಂಭವಿಸಿದೆ.
ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಕೇರಳದಿಂದ ಮಂಗಳೂರು ಕಡೆಗೆ ವೇಗದಲ್ಲಿ ಬರುತ್ತಿದ್ದ ಆಂಬುಲೆನ್ಸ್ ಫ್ರಾನ್ಸಿಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಫ್ರಾನ್ಸಿಸ್ ದೂರ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಂಬುಲೆನ್ಸ್ ಖಾಲಿ ಇದ್ದು, ಚಾಲಕ ಅದೇ ಆಂಬುಲೆನ್ಸ್ ಮೂಲಕ ಫ್ರಾನ್ಸಿಸ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.