ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕವನ, ಕಿರು ಕಥೆ ಆಹ್ವಾನ

Published 9 ಆಗಸ್ಟ್ 2023, 12:34 IST
Last Updated 9 ಆಗಸ್ಟ್ 2023, 12:34 IST
ಅಕ್ಷರ ಗಾತ್ರ

ಮಂಗಳೂರು: ನಾಡೋಜ ದಿ. ಕಯ್ಯಾರ ಕಿಞ್ಞಣ್ಣ ರೈ ಸ್ಮರಣಾರ್ಥ 101 ಕವನಗಳು ಮತ್ತು ಕಿರು ಕಥೆಗಳ (ಮೈಕ್ರೊ ಸ್ಟೋರೀಸ್) ಸಂಕಲನವನ್ನು ರಚಿಸಲು ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟ್, ಕಾಸರಗೋಡು ಪೆರಡಾಲದ ಕವಿತಾ ಕುಟೀರ ಹಾಗೂ ನವಜೀವನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಮುಂದಾಗಿದ್ದು, ಸಂಕಲನಕ್ಕಾಗಿ ಕವನ ಮತ್ತು ಕಥೆಗಳನ್ನು ಆಹ್ವಾನಿಸಲಾಗಿದೆ.

18–35 ವರ್ಷ ವಯಸ್ಸಿನ (1988ರ ಜನವರಿಯಿಂದ 2004ರ ಡಿಸೆಂಬರ್ ನಡುವೆ ಜನಿಸಿದ), ದಕ್ಷಿಣ ಕನ್ನಡ, ಉಡುಪಿ ಅಥವಾ ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿ, ಬೆಳೆದ ಮತ್ತು ಶಿಕ್ಷಣ ಪಡೆದ ಯುವ ಬರಹಗಾರರು ಕಥೆ– ಕವನ ಕಳುಹಿಸಬಹುದು.

ಕವಿತೆ ಗರಿಷ್ಠ 300 ಪದ, ಕಿರು ಕಥೆ ಗರಿಷ್ಠ 500 ಪದಗಳ ಮಿತಿಯಲ್ಲಿರಬೇಕು. ಪ್ರತಿ ಬರಹಗಾರರು 3ರಿಂದ 5 ಕವನ, ಕಿರು ಕಥೆಗಳು ಮತ್ತು 10-12 ಚುಟುಕು ಕವನಗಳನ್ನು ಆಯ್ಕೆಗಾಗಿ ಸಲ್ಲಿಸಬಹುದು. ಬರಹ ಯುನಿಕೋಡ್‍ನಲ್ಲಿ ಇರಬೇಕು. ಸ್ವಂತ ರಚನೆಗಳಾಗಿರಬೇಕು. ಯಾವುದೇ ಪತ್ರಿಕೆ ಅಥವಾ ಬ್ಲಾಗ್‍ನಲ್ಲಿ ಪ್ರಕಟವಾಗಿರಬಾರದು. ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್‍ ವಿಳಾಸದೊಂದಿಗೆ 80 ಪದಗಳನ್ನು ಮೀರದ ಕಿರು ಪರಿಚಯವನ್ನು ಪ್ರತ್ಯೇಕ ಲಗತ್ತಾಗಿ ಕಳುಹಿಸಬೇಕು. ಕಾಲೇಜು ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್, ಭಾವಚಿತ್ರ ಪ್ರತಿಯೊಂದಿಗೆ ಸಲ್ಲಿಸಬೇಕು. ಕೃತಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕ.

ಕೃತಿಗಳನ್ನು ಕಥೆ– ಕವನವನ್ನು artkanaratrust@gmail.com ಗೆ ಇ–ಮೇಲ್ ಮಾಡಬೇಕು. ಆಯ್ಕೆಯಾದ ಬರಹಗಳನ್ನು ಅಕ್ಟೋಬರ್ 31ರ ಒಳಗೆ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT