ಅಡ್ಡಾದಿಡ್ಡಿ ವಾಹನ ಚಾಲನೆ: ಕೇರಳದ ಯುವಕನ ಬಂಧನ

7

ಅಡ್ಡಾದಿಡ್ಡಿ ವಾಹನ ಚಾಲನೆ: ಕೇರಳದ ಯುವಕನ ಬಂಧನ

Published:
Updated:

ಮಂಗಳೂರು: ಕರ್ತವ್ಯನಿರತ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ, ಕಾನ್‌ಸ್ಟೆಬಲ್‌ ಒಬ್ಬರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪದ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ಯುವಕನೊಬ್ಬನನ್ನು ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿ ಮುಹಮ್ಮದ್ ಕುಂಞಿ ಬಂಧಿತ ಯುವಕ. ಈತ ಕೇರಳದಿಂದ ಶೆವರ್ಲೆ ಕಾರಿನಲ್ಲಿ ಶನಿವಾರ ಮಧ್ಯಾಹ್ನ ನಗರಕ್ಕೆ ಬಂದಿದ್ದ. ಕಾರಿನ ಗಾಜುಗಳಲ್ಲಿ ಗಾಢವಾದ ಕಪ್ಪು ಬಣ್ಣದ ಟಿಂಟ್‌ ಹಾಕಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಸೂಚಿಸಲು ಪಂಪ್‌ವೆಲ್‌ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಯತ್ನಿಸಿದ್ದರು.

ಆದರೆ, ಆರೋಪಿಯು ಕಾರು ನಿಲ್ಲಿಸದೇ ಪರಾರಿಯಾಗಿದ್ದ. ನಂತರ ಬಲ್ಮಠ, ಬಂಟ್ಸ್‌ ಹಾಸ್ಟೆಲ್‌ ವೃತ್ತದಲ್ಲೂ ಪೊಲೀಸರ ಸೂಚನೆ ಧಿಕ್ಕರಿಸಿ ಪರಾರಿಯಾಗಿದ್ದ. ಕದ್ರಿ ಕಂಬಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗೆ ಹೋಗುತ್ತಿದ್ದಾಗ ಪೂರ್ವ ಸಂಚಾರ ಠಾಣೆ ಪೊಲೀಸರು ಅಡ್ಡಗಟ್ಟಿದ್ದರು. ಆಗ ಕಾನ್‌ಸ್ಟೆಬಲ್‌ ಗಜೇಂದ್ರ ಅವರಿಗೆ ಕಾರು ಡಿಕ್ಕಿಯಾಗಿ, ಅವರು ಗಾಯಗೊಂಡರು. ಬಳಿಕ ಪೊಲೀಸರು ಸುತ್ತುವರಿದು ಕಾರಿನೊಂದಿಗೆ ಆರೋಪಿಯನ್ನು ಬಂಧಿಸಿದರು.

‘ಆರೋಪಿ ಚಾಲಕ ವಾಹನ ಚಾಲನಾ ಪರವಾನಗಿ ಹೊಂದಿಲ್ಲ. ಈ ಕಾರಣಕ್ಕಾಗಿಯೇ ಆತ ಪರಾರಿಯಾಗಲು ಯತ್ನಿಸಿದ್ದ. ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಮಂಗಳೂರು ‍ಪೂರ್ವ ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !