ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ: ‘ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ರಾಜಕೀಯ’

Last Updated 6 ಫೆಬ್ರುವರಿ 2023, 6:11 IST
ಅಕ್ಷರ ಗಾತ್ರ

ಸುಳ್ಯ: ಬಿಜೆಪಿ ಸರ್ಕಾರಕ್ಕೆ ಜನಸಾ ಮಾನ್ಯರ ಬಗ್ಗೆ ಕಾಳಜಿ ಇಲ್ಲ. ಯಾವುದೇ ಅಭಿವೃದ್ದಿ ಮಾಡಿಲ್ಲ. ಜನರಿಗೆ ಉದ್ಯೋಗವಕಾಶ ನೀಡುತ್ತಿಲ್ಲ. ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೇವಲ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ದೂರಿದರು.

ಬೆಳ್ಳಾರೆಯಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆ ಯಲ್ಲಿ ಮಾತನಾಡಿದ ಅವರು ತಾರತಮ್ಯ ಮಾಡುವ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕು. ಬಿಜೆಪಿ ಆಡಳಿತದವರನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಆರ್.ವಿ.ದೇಶ ಪಾಂಡೆ ಮಾತನಾಡಿ ಬಿಜೆಪಿಯ ಭರ ವಸೆಗಳು ಪೊಳ್ಳು. ಹಿಂದುತ್ವದ ಪ್ರಣಾಳಿಕೆ ಮಾಡಿ ಚುನಾವಣೆ ಗೆಲ್ಲುತ್ತಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವ ರಮಾನಾಥ ರೈ, ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಮಾಜಿ ಶಾಸಕ ಮಧುಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಹರೀಶ್ ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಪಿ.ಎಸ್.ಗಂಗಾಧರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹೇಮನಾಥ ಶೆಟ್ಟಿ ಕಾವು, ಎಂ.ಎಸ್.ಮಹಮ್ಮದ್, ಕಡಬ ಬ್ಲಾಕ್ ಅಧ್ಯಕ್ಷ ಚಿನ್ನಪ್ಪ ಗೌಡ, ಕೆಪಿಸಿಸಿ ಮಾಜಿ ಸಂಯೋಜಕ ಪ್ರದೀಪ್ ರೈ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರವೀಣ ರೈ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರಾಜೀವಿ ಆರ್ ರೈ, ಸರಸ್ವತಿ ಕಾಮತ್, ಚಂದ್ರಶೇಖರ ಕಾಮತ್, ಚಂದ್ರಲಿಂಗಂ, ಟಿ.ಎಂ.ಶಹೀದ್, ಸಂಶುದ್ದೀನ್, ನಂದಕುಮಾರ್, ಕೃಷ್ಣಪ್ಪ ಪೆರುವಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಗನ್ನಾಥ ಪೂಜಾರಿ ,ಕಲ್ಮಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಹಾಜಿರಾ, ವಿಶ್ವನಾಥ ರೈ ಕಳಂಜ, ಶ್ಯಾಮಸುಂದರ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT