ಗುರುವಾರ , ಸೆಪ್ಟೆಂಬರ್ 29, 2022
28 °C

ಪೂರ್ಣಾನಂದ ಪ್ರಾಡಕ್ಟ್ಸ್‌11 ಕ್ಕೆ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಶ್ರೀಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯು ಪೂರ್ಣಾನಂದ ಪ್ರಾಡಕ್ಟ್ಸ್‌ ಘಟಕವನ್ನು ಆರಂಭಿಸಿದ್ದು, ಇದೇ 11ರಂದು ಎನ್‌ಜಿಒ ಕಟ್ಟಡದ ಸಭಾಂಗಣದಲ್ಲಿ ಮಧ್ಯಾಹ್ನ 12ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಗಣೇಶ್ ಶೆಣೈ ತಿಳಿಸಿದರು.

 ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀಪೂರ್ಣಾನಂದಸ್ವಾಮಿ ಅವರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಸೇರಿ 2002ರಲ್ಲಿ ಆರಂಭಿಸಿದ ಸಹಕಾರಿ ಸಂಸ್ಥೆಯು 5000 ಸದಸ್ಯರನ್ನು ಹಾಗೂ 49 ಲಕ್ಷ ಷೇರು ಬಂಡವಾಳವನ್ನು ಹೊಂದಿದೆ. ₹ 150 ಕೋಟಿ ವ್ಯವಹಾರ ನಡೆಸಿದೆ. ಸಂಸ್ಥೆಯು 21ನೇ ವರ್ಷಕ್ಕೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ‘ಪೂರ್ಣಾನಂದ ಪ್ರಾಡಕ್ಟ್ಸ್’ ಘಟಕವನ್ನು ಆರಂಭಿಸಿ ಬೇಕರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

‘ಸಂಸ್ಥೆಯ ಹೊಸ ಘಟಕವನ್ನು ಶಾಸಕ ಡಿ.ವೇದವ್ಯಾಸ ಕಾಮತ್‌ ಉದ್ಘಾಟಿಸಲಿದ್ದಾರೆ. ಮಾರ್ಕೆಟಿಂಗ್ ವಾಹನವನ್ನು ಸಹಕಾರ ಭಾರತಿಯ ರಾಜ್ಯ ಘಟಕದ ಅಧ್ಯಕ್ಷ ರಾಜ ಶೇಖರ ಶೀಲವಂತ ಉದ್ಘಾಟಿಸಲಿದ್ದಾರೆ. ಉತ್ಪನ್ನ ಸ್ಟಾಲ್‌ ಅನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ  ಉದ್ಘಾಟನೆ ಮಾಡಲಿದ್ದಾರೆ. ತಿಂಡಿ ಉತ್ಪನ್ನಗಳನ್ನು ಸಹಕಾರ ಭಾರತಿಯ ಎಸ್.ಸತೀಶ್ಚಂದ್ರ ಲೋಕಾರ್ಪಣೆ ಮಾಡಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಉಪೇಂದ್ರ ನಾಯಕ್‌, ವ್ಯವಸ್ಥಾಪಕ ದಿನೇಶ್ ಜೋಗಿ, ಪ್ರಧಾನ ವ್ಯವಸ್ಥಾಪಕ ವಾಸುದೇವ ಯು. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು